ನವದೆಹಲಿ: ಭಾರತದ ಮುಸ್ಲಿಮರು ತಮ್ಮ ದೇಶವನ್ನು ಪ್ರೀತಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಭಯೋತ್ಪಾದಕ ಸಂಘಟನೆ ಒಂದು ದೊಡ್ಡ ಸವಾಲೆಂದು ನಾನು ಭಾವಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಭಾರತದಲ್ಲಿ ಇಸ್ಲಾಂ ಧರ್ಮವನ್ನು ಅನುಸರಿಸುವವರು ತಮ್ಮ ದೇಶವನ್ನು ಪ್ರೀತಿಸುತ್ತಾರೆ. ಇಸಿಸ್ನ ಮೂಲಭೂತವಾದಿ ಧೋರಣೆಯ ಬೆದರಿಕೆಯಿಂದ ದೇಶಕ್ಕೆ ಯಾವುದೇ ಸಮಸ್ಯೆಯಿಲ್ಲ. ಯಾವುದೇ ಮುಗ್ಧ ಜನರಿಗೆ ತೊಂದರೆ ಕೊಡಬಾರದು ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡದೇ ಬಿಡಬಾರದು ಎಂದು ಅವರು ಹೇಳಿದ್ದಾರೆ.
ಹೈದರಾಬಾದ್ನ ಸರ್ದಾರ್ ವಲ್ಲಭ್ಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ 3 ದಿನಗಳ ಕಾಲ ನಡೆದ ಡಿಜಿಪಿ ಸಮ್ಮೇಳನದ ಕುರಿತು ಮಾತನಾಡಿದ ಸಿಂಗ್ ಅವರು, ಸಭೆಯಲ್ಲಿ ಭದ್ರತಾ ಸನ್ನಿವೇಶಗಳು, ರಾಜ್ಯ ಪೊಲೀಸ್ ಎದುರಿಸುತ್ತಿರುವ ಸವಾಲುಗಳು, ಸೈಬರ್ ಅಪರಾಧ, ಮೂಲಭೂತವಾದ ರಸ್ತೆ ಮತ್ತು ವಿಮಾನ ನಿಲ್ದಾಣಗಳ ಸುರಕ್ಷತೆ ಬಗ್ಗೆ ಚರ್ಚಿಲಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ರಾಜ್ಯ ಭದ್ರತಾ ಸಂಸ್ಥೆಗಳು ಪ್ರಸಕ್ತ ವರ್ಷದಲ್ಲಿ ಈವರೆಗೆ 68 ಇಸಿಸ್ ಬೆಂಬಲಿಗರನ್ನು ಬಂಧಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಹಂಸರಾಜ್ ಅಹಿರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.