ನವದೆಹಲಿ : ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದ ಪರಿಣಾಮದಿಂದಾಗಿ ಅಂಚೆ ಕಛೇರಿಗಳಲ್ಲಿ 32,631 ಕೋಟಿ ರೂ. ಠೇವಣಿಯಾಗಿದೆ.
ದೇಶದಾದ್ಯಂತ ಇರುವ ಸುಮಾರು 1.55 ಲಕ್ಷ ಅಂಚೆ ಕಛೇರಿಗಳಲ್ಲಿ ಇದುವರೆಗೆ 32,631 ಕೋಟಿ ರೂ. ಠೇವಣಿಯಾಗಿದೆ.
ನವೆಂಬರ್ 10 ರಿಂದ 24 ರೊಳಗೆ ಅಂಚೆ ಕಛೇರಿಗಳಲ್ಲಿ 578 ಲಕ್ಷ ನೋಟುಗಳನ್ನು ವಿನಿಮಯ ಮಾಡಲಾಗಿದೆ. ಅವುಗಳ ಮೊತ್ತ 3,680 ಕೋಟಿ ರೂ. ಮೊತ್ತ. 43.48 ಕೋಟಿ ರೂ. ಮೌಲ್ಯದ 500 ರೂ. ಮತ್ತು 100 ರೂ. ನೋಟುಗಳನ್ನು ಠೇವಣಿಗಾಗಿ ಸ್ವೀಕರಿಸಲಾಗಿದೆ. ಇದರ ಮೊತ್ತ 32,631 ಕೋಟಿ ರೂ. ಎಂದು ಅಂಚೆ ಇಲಾಖೆಯ ಕಾರ್ಯದರ್ಶಿ ಬಿ. ವಿ. ಸುಧಾಕರ್ ಹೇಳಿದ್ದಾರೆ.
1.55 ಲಕ್ಷ ಅಂಚೆ ಕಛೇರಿಗಳಲ್ಲಿ ಸುಮಾರು 1.30 ಲಕ್ಷ ಗ್ರಾಮಾಂತರ ಮತ್ತು ಉಳಿದ 25,000 ನಗರ ಮತ್ತು ಅರೆನಗರ ಪ್ರದೇಶಗಳ ಅಂಚೆ ಕಛೇರಿಗಳಲ್ಲಿ ಠೇವಣಿಯಾಗಿದೆ. ಇದೇ ಸಂದರ್ಭ ಅಂಚೆ ಕಛೇರಿಗಳಿಂದ 3,583 ಕೋಟಿ ರೂ. ವಿತ್ಡ್ರಾ ಕೂಡಾ ಮಾಡಲಾಗಿದೆ ಎಂದಿದ್ದಾರೆ.
ನವೆಂಬರ್ 8 ರ ಮಧ್ಯರಾತ್ರಿಯಿಂದ ರೂ. 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧ ಮಾಡಲಾಗಿದ್ದು, ನವೆಂಬರ್ 24 ರವರೆಗೆ ಈ ನೋಟುಗಳನ್ನು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಅಂಚೆ ಕಛೇರಿಯಲ್ಲಿ ಖಾತೆ ಇಲ್ಲದವರಿಗೂ ಐಡಿ ಕಾರ್ಡ್ ತೋರಿಸಿ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿತ್ತು. ನವೆಂಬರ್ 24ರ ನಂತರ ನೋಟು ವಿನಿಮಯವನ್ನು ಸ್ಥಗಿತಗೊಳಿಸಲಾಗಿದ್ದು, ಡಿಸೆಂಬರ್ 30 ರವರೆಗೆ ಹಳೆ ನೋಟುಗಳನ್ನು ಬ್ಯಾಂಕ್ಗಳಲ್ಲಿ ಠೇವಣಿ ಇಡಲು ಮಾತ್ರ ಸಾಧ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.