ನವದೆಹಲಿ: ಭಧ್ರತೆ ಸಂಬಂಧಿತ ಸಂಪುಟ ಸಮಿತಿ ರೂ.2,500 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ನೌಕಾಪಡೆಗಾಗಿ 12 ಅಪ್ಗ್ರೇಡೆಡ್ ಡಾರ್ನಿಯರ್ ಕಣ್ಗಾವಲು ವಿಮಾನಗಳನ್ನು ಖರೀದಿಸಲು ಬುಧವಾರ ಅನುಮತಿಸಿದೆ.
ಈ ಪ್ರಸ್ತಾವನೆಗೆ ಮೊದಲ ಬಾರಿ ರಕ್ಷಣಾ ಉಪಕರಣಗಳ ಖರೀದಿ ಮಂಡಳಿ ಅಕ್ಟೋಬರ್ 2014ರಲ್ಲಿ ಅಕ್ಸೆಪ್ಟೆನ್ಸ್ ಆಫ್ ನೆಸೆಸಿಟಿ (ಎಒಎನ್) ಅಂಗೀಕರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಿಸಿಎಸ್ ಇದಕ್ಕೆ ಅನುಮೋದನೆ ನೀಡಿದೆ.
ಈ ವಿಮಾನಗಳನ್ನು ಕಾನ್ಪುರದ ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ಸಾರಿಗೆ ವಿಮಾನ ವಿಭಾದಲ್ಲಿ ತಯಾರಿಸಲಿದ್ದು, ಅದು 1984ರಿಂದ ಈವರೆಗೆ ಇಂತಹ 120 ವಿಮಾನಗಳನ್ನು ತಯಾರಿಸಿದೆ.
ಈ ವಿಮಶನಗಳು ಕಣ್ಗಾವಲು ರೇಡಾರ್, ಫಾರ್ವರ್ಡ್ ಲುಕಿಂಗ್ ಇನ್ಫ್ರಾರೆಡ್ (ಎಫ್ಎಲ್ಐಆರ್), ಎಲೆಕ್ಟ್ರಾನಿಕ್ ಬೆಂಬಲಿತ ಉಪಕರಗಳು (ಇಎಸ್ಎಂ), ಉಪಗ್ರಹ ಸಂವಹನ, ಡೇಟಾ ಲಿಂಕ್ಸ್, ರಹಸ್ಯ ಸಂಭಾಷಣೆ ಉಪಕರಣಗಳು ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.