ಜಮ್ಮು: ಮೂವರು ಭಾರತೀಯ ಯೋಧರ ಹತ್ಯೆಗೈದು ಓರ್ವನ ಶಿರಚ್ಛೇದ ಮಾಡಿರುವ ಪಾಕ್ ವಿರುದ್ಧ ಬಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಯೋಧರ ದಾಳಿಗೆ ಮೂವರು ಪಾಕ್ ಯೋಧರು ಹಾಗೂ 11 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಯೋಧರ ಹತ್ಯೆಗೆ ಭಾರೀ ಪ್ರತೀಕಾರ ತೋರಿದ ಭಾರತೀಯ ಸೇನೆ, ಗಡಿಯಲ್ಲಿ ಮಂಗಳವಾರ ರಾತ್ರಿಯಿಂದಲೇ ಎರಡೂ ಕಡೆಗಳಿಂದ ಭಾರೀ ಗುಂಡಿನ ದಾಳಿ ನಡೆದಿದೆ. ಪಾಕಿಸ್ಥಾನಿ ನೆಲೆಗಳು ಮತ್ತು ಶಿಬಿಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಮೂವರು ಪಾಕ್ ಯೋಧರ ಹತ್ಯೆಗೈಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ನಿರ್ದೇಶಕರು ಪಾಕಿಸ್ಥಾನದ ಮನವಿಯಂತೆ ಬುಧವಾರ ಸಂಜೆ ಅನಿಗದಿತ ಹಾಟ್ಲೈನ್ ಸಂಭಾಷಣೆ ನಡೆಸಿದ್ದು, ಭಾರತದ ಡಿಜಿಎಂಒ ಲೆಫ್ಟಿನೆಂಟ್ ರಣಬೀರ್ ಸಿಂಗ್ ಪಾಕಿಸ್ಥಾನಿ ನಾಗರಿಕರ ಸಾವುನೋವಿಗೆ ದುಃಖ ವ್ಯಕ್ತಪಡಿಸಿದ್ದಾರೆ. ಆದರೆ ಭಾರತೀಯ ಸೇನೆ ಪಾಕಿಸ್ಥಾನ ಕದನ ವಿರಾಮ ಉಲ್ಲಂಘನೆ ನಡೆಸುತ್ತಿರುವ ಸ್ಥಳಗಳನ್ನು ಮಾತ್ರ ಗುರಿಯಾಗಿಸಿದೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಒಳನುಸುಳುತ್ತಿರುವ ಭಯೋತ್ಪಾದಕರಿಂದ ಭಾರತೀಯ ಸೈನಿಕರ ಶಿರದ್ಧೇದದಂತಹ ಅನೈತ ಕೃತ್ಯಗಳ ವಿಚಾರದ ಬಗ್ಗೆ ಹೇಳಿದ ಲೆಫ್ಟಿನೆಂಟ್ ರಣಬೀರ್ ಸಿಂಗ್, ಪಾಕಿಸ್ಥಾನ ತನ್ನ ಸೈನಿಕರು ಮತ್ತು ಭಯೋತ್ಪಾದಕರು ನಡೆಸುತ್ತಿರುವ ಅನೈತಿಕ ಕೃತ್ಯಗಳನ್ನು ನಿಗ್ರಹಿಸಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಲ್ಲಿ ಮಾತ್ರ ಗಡಿಯಲ್ಲಿ ಯಥಾಸ್ಥಿತಿ ಕಾಣಬಹುದು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.