ನವದೆಹಲಿ : ನವೆಂಬರ್ 24 ರಿಂದ ಬಜಾರ್ನಲ್ಲೂ ರೂ. 2000 ವಿತ್ಡ್ರಾ ಮಾಡಬಹುದು ಎಂದು ಬಿಗ್ ಬಜಾರ್ ಸಿಇಒ ಕಿಶೋರ್ ಬಿಯಾನಿ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಮುಂದುವರೆದಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಇದೀಗ ಬಿಗ್ ಬಜಾರ್, ಎಫ್ಬಿಬಿ ಮಳಿಗೆಗಳಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಸ್ಪೈಪ್ ಮಾಡಿ 2000 ರೂ. ಹಣವನ್ನು ಪಡೆಯಬಹುದಾಗಿದೆ.
ವರದಿಗಳ ಪ್ರಕಾರ, ಎಟಿಎಂಗಳಲ್ಲಿ ಹೆಚ್ಚುತ್ತಿರುವ ಕ್ಯೂ ಮತ್ತು ಬಹಳಷ್ಟು ಬೇಗ ಹಣ ಖಾಲಿಯಾಗುತ್ತಿರುವ ಹಿನ್ನಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿಗ್ ಬಜಾರ್ನೊಂದಿಗೆ ಟೈ ಅಪ್ ಮಾಡಿಕೊಂಡಿದ್ದು, ಬಿಗ್ ಬಜಾರ್ ಮಳಿಗೆಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಸ್ಪೈಪ್ ಮಾಡಿ ಹಣ ಪಡೆಯಬಹುದು ಎಂದು ಹೇಳಲಾಗಿದೆ.
ಈ ಕುರಿತು ಬಿಗ್ ಬಜಾರ್ ಸಿಇಒ ಕಿಶೋರ್ ಬಿಯಾನಿ ಅವರು ಟ್ವೀಟ್ ಮಾಡಿದ್ದಾರೆ.
Now one can withdraw 2000rs from bigbazaar using your debit card from this Thursday onwards pic.twitter.com/UH3BjLZbra
— Kishore Biyani (@kishore_biyani) November 22, 2016
Cash being dispensed at bigbazaar is the money received from sales of customers being circulated back to customers, no withdrawal from bank
— Kishore Biyani (@kishore_biyani) November 23, 2016
ಈ ಸೌಲಭ್ಯ ದೇಶಾದ್ಯಂತ 115 ನಗರಗಳು ಮತ್ತು ಪಟ್ಟಣಗಳು ಸೇರಿದಂತೆ ಸುಮಾರು 258 ಬಿಗ್ ಬಜಾರ್ ಮತ್ತು ಎಫ್ಬಿಬಿ ಮಳಿಗೆಗಳಲ್ಲಿ ನಾಳೆಯಿಂದ (ನ. 24) ಲಭ್ಯವಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.