ನವದೆಹಲಿ: ಮೋದಿ ಅಂದರೆ-ಮೇಕರ್ ಆಫ್ ಡೆವೆಲಪ್ಡ್ ಇಂಡಿಯಾ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡುನಾಯ್ಡು ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಇಂದಿರಾ ಗಾಂಧಿ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪ್ರಧಾನಿ ಮೋದಿ ಅವರನ್ನು ವಾಸ್ತವಾಗಿ ಹೋಲಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ ಅವರು ಎಂದು ನಾಯ್ಡು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಏನಾಗಿತ್ತು ಎಂದು ಜನರು ಮರೆಯಲು ಸಾಧ್ಯವಿಲ್ಲ. ಜನರು ಅಧಿಕಾರಕ್ಕೆ ಅಂಟಿಕೊಳ್ಳಲು ಪ್ರಯತ್ನಿಸಿದರು. ಆದರೆ ಪ್ರತಿಯೊಂದಕ್ಕೂ ಅದರದ್ದೇ ಕಾನೂನಿದೆ ಎಂದು ನಾಯ್ಡು ಹೇಳಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಇಂದಿರಾ ಗಾಂಧಿ ಅವರ ನಡುವೆ ಹೋಲಿಕೆ ಸಾಧ್ಯವಿಲ್ಲ. ತಮ್ಮ ಪಕ್ಷ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರೋಧವಾಗಿದ್ದು, ಮೋದಿ ಮತ್ತು ಇಂದಿರಾ ಗಾಂಧಿ ಅವರ ನಡುವಿನ ಹೋಲಿಕೆಗಳಿಂದ ತಾನು ಯಾವುದೇ ತೊಂದರೆಗೆ ಸಿಲುಕಿಲ್ಲ ಎಂದು ಹೇಳಿದ್ದರು.
ನಾನು ಅದನ್ನು ನಂಬುವುದಿಲ್ಲ. ಆದ್ದರಿಂದ ನನಗೆ ಅದರಿಂದ ಯಾವುದೇ ತೊಂದರೆ ಆಗದು. ಕಾಂಗ್ರೆಸ್ ಪಕ್ಷ ತನ್ನದೇ ಅಭಿಪ್ರಾಯಗಳನ್ನು ಹೊಂದಿದೆ. ಇಲ್ಲಿ ಯಾವುದೇ ಹೋಲಿಕೆ ಇಲ್ಲ. ರಾಜಕೀಯ ಯುಗ ಅಥವಾ ಇತಿಹಾಸದಲ್ಲಿ ಅದು ತನ್ನ ಸ್ವಂತ ಸಮಸ್ಯೆಗಳನ್ನು, ತನ್ನದೇ ನಾಯಕರು ಮತ್ತು ತನ್ನ ವಿರೋಧಿಗಳನ್ನು ಹೊಂದಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.