ಶ್ರೀನಗರ : ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ನಡೆದ ಉಗ್ರರ ವಿರುದ್ಧ ಎನ್ಕೌಂಟರ್ ಪ್ರಕರಣದಲ್ಲಿ ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಹತ್ಯೆಗೈದಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಅವರ ಬಳಿ 2000 ರೂ. ಮುಖಬೆಲೆಯ ಹೊಸ ನೋಟ್ಗಳು ಪತ್ತೆಯಾಗಿವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಬಂಡಿಪೊರಾದಲ್ಲಿ ನಡೆದ ಉಗ್ರರ ವಿರುದ್ಧ ಎನ್ಕೌಂಟರ್ ಪ್ರಕರಣದಲ್ಲಿ ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಹತ್ಯೆಗೈದಿತ್ತು. ಬಳಿಕ ಉಗ್ರರನ್ನು ಪರಿಶೀಲನೆ ನಡೆಸಿದಾಗ ಅವರ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಸೇರಿದಂತೆ ರೂ. 2000 ಮುಖಬೆಲೆಯ 2 ಹೊಸ ನೋಟ್ಗಳು ಪತ್ತೆಯಾಗಿವೆ. ಇಬ್ಬರೂ ತಲಾ 15 ಸಾವಿರ ರೂ. ಹಣವನ್ನು ಹೊಂದಿದ್ದರು. ಅದರಲ್ಲಿ 2 ನೋಟ್ಗಳು ಮಾತ್ರ ಹೊಸ ನೋಟ್ಗಳಾಗಿವೆ. ಮೃತ ಉಗ್ರರು ಲಷ್ಕರ್-ಇ-ತೊಯ್ಬಾ ಸಂಘಟನೆಗೆ ಸೇರಿದವರಾಗಿದ್ದು, ಇವರ ಹಿನ್ನಲೆ ಕುರಿತಂತೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಹತ್ಯೆಯಾದ ಉಗ್ರರು ಸ್ಥಳೀಯರಿಂದ ಸಹಾಯ ಪಡೆದು ದಾಳಿ ನಡೆಸುತ್ತಿರಬಹುದು ಎಂದು ಊಹಿಸಲಾಗಿದೆ. ಇದಕ್ಕೆ ಪೂರಕವೆಂಬಂತೆ ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮೇಲೆ ದಾಳಿ ಮಾಡಿ ಉಗ್ರರು ಬಂದೂಕಿನಿಂದ ಸಿಬ್ಬಂದಿಗಳನ್ನು ಹೆದರಿಸಿ ಸುಮಾರು 15 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಹಣವೇನಾದರೂ ಉಗ್ರರ ಕೈ ಸೇರಿರಬಹುದೇ ಎಂದೂ ಊಹಿಸಲಾಗಿದೆ. ಈ ಕುರಿತು ಸೇನಾಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.