ಕೊಚಿ: ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡುವ ಕೇರಳದ ಪ್ರಖ್ಯಾತ ಬೆಟ್ಟದ ದೇವಾಲಯ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಾಲಯವನ್ನು ಇನ್ನು ಮುಂದೆ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಎಂದು ಕರೆಯಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಒಂದು ಪ್ರಮುಖ ನಿರ್ಧಾರದಂತೆ, ದೇವಾಲಯದ ಆಡಳಿತ ನಡೆಸುವ ತಿರುವಾಂಕೂರು ದೇವಸ್ವಂ ಮಂಡಳಿ ದೇವಾಲಯದ ಹೆಸರನ್ನು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಎಂದು ಬದಲಿಸುವಂತೆ ಆದೇಶ ಜಾರಿಗೊಳಿಸಿದೆ.
ಅಕೋಬರ್ 5ರಂದು ನಡೆದ ಅಧಿಕಾರಿಗಳ ಮಂಡಳಿ ಸಭೆಯಲ್ಲಿ ದೇವಾಲಯದ ಹೆಸರನ್ನು ಬದಲಿಸಲು ನಿರ್ಧರಿಸಲಾಗಿತ್ತು. ದೇವಸ್ವಂ ಮಂಡಳಿ ಅಡಿಯಲ್ಲಿ ಅನೇಕ ಧರ್ಮಶಾಸ್ತ ದೇವಾಲಯಗಳಿವೆ. ಆದರೆ ಶಬರಿಮಲೆ ವಿಶ್ವದಲ್ಲೇ ಅಯ್ಯಪ್ಪಸ್ವಾಮಿ ನೆಲೆಸಿರುವ ಏಕೈಕ ಪವಿತ್ರ ಕ್ಷೇತ್ರವಾಗಿದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಪಟ್ಟಣಂತಿಟ್ಟ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಸ್ಥಾಪಿತಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.