ವಾಷಿಂಗ್ಟನ್ : ಅಮೇರಿಕಾದ ಮೇರಿಲ್ಯಾಂಡ್ನಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಅಮೇರಿಕನ್ 23 ವರ್ಷದ ರಹೀಲಾ ಅಹ್ಮದ್ ಅವರು ಜಯ ಗಳಿಸಿದ್ದಾರೆ.
ಮುಸ್ಲಿಂ ಮೂಲದ ಅಮೇರಿಕಾ ಪ್ರಜೆಯಾಗಿರುವ ರಹೀಲಾ ಅಹ್ಮದ್ ಅವರು ಮೇರಿಲ್ಯಾಂಡ್ನ ಪ್ರಿನ್ಸ್ ಜಾರ್ಜ್ ಕೌಂಟಿ ರೇಸಿನಲ್ಲಿ ಶಾಲಾ ಮಂಡಳಿ ಪರ ವಿಜಯ ಸಾಧಿಸಿದ್ದಾರೆ. ಶೇ. 1.5 ರಷ್ಟು ಗಮನಾರ್ಹ ವ್ಯತ್ಯಾಸದಲ್ಲಿ ಇವರು ಜಯ ಗಳಿಸಿದ್ದಾರೆ.
ರಹೀಲಾ ಅಹ್ಮದ್ ಅವರ ತಂದೆ ಭಾರತದವರಾಗಿದ್ದು, ತಾಯಿ ಪಾಕ್ ಮೂಲದವರಾಗಿದ್ದಾರೆ. ರಾಹಿಲ್ ಅವರ ಗೆಲುವಿನಿಂದಾಗಿ ಅವರು ವಾಸವಿರುವ ಜಿಲ್ಲೆಯ ಶೇ. 80 ರಷ್ಟು ಆಫ್ರಿಕನ್ – ಅಮೇರಿಕನ್ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಇವರನ್ನು ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ ಮಾಜಿ ಛೇರ್ಮನ್ ಮೈಕೆಲ್ ಸ್ಟೀಲ್ ಅನುಮೋದಿಸಿದ್ದರು.
ಅಲ್ಪಸಂಖ್ಯಾತರ ಸ್ಫೂರ್ತಿಯ ರೂಪದಲ್ಲಿ ಕಾರ್ಯ ನಿರ್ವಹಿಸಲು ಬಯಸುವೆ. ಅವರು ನಂಬಿಕೆ, ಕಠಿಣ ಪರಿಶ್ರಮಗಳಿಂದ ಜೀವನದಲ್ಲಿ ಏನನ್ನೂ ಸಾಧಿಸಬಹುದು ಎಂಬಂತಹ ಸ್ಫೂರ್ತಿಯನ್ನು ನಾನು ಅವರಿಗೆ ನೀಡಬಯಸುತ್ತೇನೆ. ಈ ಗೆಲುವು ಅವರೆಲ್ಲರ ಬೆಂಬಲ ಮತ್ತು ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ಎಂದು ರಹೀಲಾ ಅಹ್ಮದ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.