ಮುಂಬೈ : ಮೇಡ್ ಇನ್ ಇಂಡಿಯಾ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್ಎಸ್ ಚೆನ್ನೈ ಇಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.
ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಲ್ಪಟ್ಟಿರುವ ಮತ್ತು ಕೋಲ್ಕತ್ತ ದರ್ಜೆಯ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್ಎಸ್ ಚೆನ್ನೈ ಇಂದು ಮುಂಬೈಯಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿತು. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಈ ನೂತನ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್ಎಸ್ ಚೆನ್ನೈಯನ್ನು ನೌಕಾಪಡೆಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸಿದರು.
ಮುಂಬೈಯ ಮಝಂಗಾವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಸಂಸ್ಥೆಯು ‘ಐಎನ್ಎಸ್ ಚೆನ್ನೈ’ ಯನ್ನು ಉತ್ಪಾದಿಸಿದೆ. ಇದು ಪ್ರಸ್ತುತ ಉತ್ಪಾದಿಸಿರುವ ಕ್ಷಿಪಣಿ ವಿನಾಶಕಗಳಲ್ಲೇ ಅತೀ ದೊಡ್ಡದು ಎನ್ನಲಾಗಿದೆ. 164 ಮೀ. ಉದ್ದ ಹಾಗೂ 7400 ಟನೆ ಸಾಮರ್ಥ್ಯವನ್ನು ಹೊಂದಿದ್ದು, ಬ್ರಹ್ಮೋಸ್ ಮತ್ತು ಬರಾಕ್-8 ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾಗಿರುವ ಐಎನ್ಎಸ್ ಚೆನ್ನೈ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದ್ದು ನೌಕಾಪಡೆಗೆ ಭೀಮಬಲ ಬಂದಂತಾಗಿದೆ.
ಪಶ್ಚಿಮ ನೌಕಾ ಕಮಾಂಡ್ನ ಕಮಾಂಡಿಂಗ್ ಇನ್ ಚೀಫ್ ಫ್ಲ್ಯಾಗ್ ಆಫೀಸರ್ ಅವರ ಕಾರ್ಯನಿರ್ವಹಣೆ ಮತ್ತು ಆಡಳಿತಾತ್ಮಕ ನಿಯಂತ್ರಣದಲ್ಲಿ ಐಎನ್ಎಸ್ ಚೆನ್ನೈ ಇರಲಿದ್ದು, ಕೆಲವು ಸಾಗರಿಕ ಪ್ರಯೋಗಗಳನ್ನು ಪೂರ್ಣಗೊಳಿಸಿದ ಬಳಿಕ ಅದನ್ನು ಮುಂಬೈಯಲ್ಲಿರುವ ಪಶ್ಚಿಮ ನೌಕಾಪಡೆಗೆ ಸೇರಿಸಲಾಗುತ್ತದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.