ಪಣಜಿ: ಶತ್ರುವಿಗೆ ಪಾಠ ಕಲಿಸಲು ಸೇನೆ ಉತ್ಸುಕವಾಗಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಸೇನೆಯ ಉತ್ಸುಕತೆ ಎತ್ತರಕ್ಕೆ ಸಾಗಿದೆ. ಶತ್ರುವಿಗೆ ಪಾಠ ಕಲಿಸಲು ಸೇನೆ ಉತ್ಸುಕವಾಗಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದೆ. ನಾವು ಅವರಿಗೆ 2-3 ಬಾರಿ ಅನುಮತಿ ನೀಡಿದ್ದೇವೆ ಎಂದು ಪರಿಕ್ಕರ್ ಅವರು ವಾಸ್ಕೋದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆ ವೇಳೆ ಹೇಳಿದ್ದಾರೆ.
ನಮ್ಮ ದೇಶದ ಗಡಿ ಸುರಕ್ಷಿತವಾಗಿದ್ದು, ಯಾರೂ ನಮ್ಮ ಮೇಲೆ ದಾಳಿ ನಡೆಸಲು ಧೈರ್ಯ ಮಾಡಲಾರರು. ನಾವು ದೇಶದ ಭದ್ರತೆಗೆ ಸಂಪೂರ್ಣವಾಗಿ ಬದ್ಧರಿದ್ದೇವೆ. ಇದು ಕೇವಲ ಗಡಿ ಭದ್ರಗೊಳಿಸುವುದು ಮಾತ್ರವಲ್ಲ, ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಪಾಕಿಸ್ಥಾನ ಮಿಲಿಟರಿ ಸಮರಾಭ್ಯಾಸ ನಡೆಸಿತ್ತು. ಪಾಕಿಸ್ಥಾನ ಪ್ರಧಾನಿ ನವಾಜ್ ಶರೀಫ್ ಅವರು ಶತ್ರುಗಳ ಯಾವುದೇ ಮಹತ್ವದ ಅಥವಾ ಅಜಾಗರೂಕ ನಡೆಗೆ ಯೋಗ್ಯ ಉತ್ತರ ನೀಡಲಿದ್ದೇವೆ ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.