ನವದೆಹಲಿ: ದೇಶೀಯ ನಿರ್ಮಾಣ ವ್ಯವಸ್ಥೆ ಹೆಚ್ಚಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನಾ ಸಂಸ್ಥೆ ಡಿಆರ್ಡಿಓ ಭಾರತೀಯ ನೌಕಾಪಡೆಗೆ ನಾಲ್ಕು ಪ್ರಮುಖ ನೌಕಾ ವ್ಯವಸ್ಥೆಗಳನ್ನು ವಿತರಿಸಲಿದೆ.
ಅಭಯ್-ಆಳವಾದ ನೀರಿನಲ್ಲಿ ಕಾರ್ಯ ನಿರ್ವಹಿಸುವ ಕಾಪ್ಯಾಕ್ಟ್ ಬೋಟ್ ‘ಸೋನಾರ್’ ವ್ಯವಸ್ಥೆ, ಹಂಸ ಯುಜಿ- ಅಭಿವೃದ್ಧಿಪಡಿಸಲಾದ ಹಂಸ ಸೂನಾರ್ ವ್ಯವಸ್ಥೆ, ಎನ್ಎಸಿಸ್- ಸಮೀಪ ಪ್ರದೇಶದ ಅಕೌಸ್ಡಿಕ್ ಕ್ಯಾರಟರೈಸೇಶನ್ ವ್ಯವಸ್ಥೆ ,ಡಿಐಎಸ್ಎಸ್-ಜಲಾಂತರ್ಗಾಮಿ ಸುಧಾರಿತ ಡಿಸ್ಟ್ರೆಸ್ ಸೋನಾರ್ ವ್ಯವಸ್ಥೆ- ಈ ನಾಲ್ಕು ವ್ಯವಸ್ಥೆಗಳನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಉಪಸ್ಥಿಯಲ್ಲಿ ನೌಕಾಪಡೆಗೆ ಒಪ್ಪಿಸಲಾಗುವುದು.
ಡಿಆರ್ಡಿಒನ ಕೊಚ್ಚಿ ಮೂಲದ ನೌಕಾ ಭೌತಿಕ ಮತ್ತು ಸಮುದ್ರಶಾಸ್ತ್ರ ಪ್ರಯೋಗಾಲಯ ಇದರ ವಿನ್ಯಾಸ ಮತ್ತು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಅಧಿಕಾರಿಗಳ ಪ್ರಕಾರ ಅಭಯ್ನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ. ಇದು ಸಕ್ರಿಯ ಹಾಗೊ ನಿಷ್ಕ್ರಿಯ ವ್ಯವಸ್ಥೆ ಹೊಂದಿದ್ದು, ಇದನ್ನು ಆಳವಾದ ನೀರು ಪ್ರದೇಶಗಳು, ಕರಾವಳಿ ಪ್ರದೇಶಗಳ ಕಣ್ಗಾವಲಿಗೆ ಬಳಸಲಾಗುವುದು. ಸೋನಾರ್ ತನ್ನ ಸಕ್ರಿಯ ಮತ್ತು ನಿಷ್ಕ್ರಿಯ ವ್ಯವಸ್ಥೆಯಿಂದ ಪತ್ತೆದಾರಿ, ವರ್ಗೀಕರಣ ಟ್ರ್ಯಾಕಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ.
ಆಭಯ್ ಸೋನಾರ್ ಮಾದರಿಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು ಇದರ ಪ್ರದರ್ಶನ ಮತ್ತು ಬಳಕೆದಾರರ ಮೌಲ್ಯಮಾಪನ ಪ್ರಯೋಗಗಳು ಪೊರ್ಣಗೊಂಡಿದೆ.
ಭಾರತೀಯ ನೌಕಾಪಡೆಯು ಅಭಯ್ ಸೋನಾರ್ ಸಿಸ್ಟಮ್ನ 3 ಹಡಗುಗಳಿಗೆ ಸೋನಾರ್ ವ್ಯವಸ್ಥೆಯನ್ನು ಸೇರ್ಪಡೆ ಮಾಡಲು ಪ್ರಸ್ತಾಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.