ಮುಂಬಯಿ: ಕಪ್ಪು ಹಣವನ್ನು ಪರಿವರ್ತಿಸಲು ಎಲ್ಲ ಸಂಭಾವ್ಯ ಪ್ರಯತ್ನಗಳನ್ನು ನಡೆಸುತ್ತಿರುವವರ ಮೇಲಿನ ಕ್ರಮ ಬಿಗಿಗೊಳಿಸಲಾಗುತ್ತಿದೆ. ಬ್ಯಾಂಕ್ ಕೌಂಟರ್ಗಳಲ್ಲಿ ಡಿ.30ರ ತನಕ ಕೇವಲ ಒಂದೇ ಬಾರಿ ರೂ. 2000 ವರೆಗೆ ಹಳೇ ನೋಟು ಎಕ್ಸ್ಚೇಂಜ್ಗೆ ಅವಕಾಶ ನೀಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಇದು ನವೆಂಬರ್ 18ರಿಂದ ಜಾರಿಗೆ ಬರಲಿದೆ.
ಬ್ಯಾಂಕ್ ಕೌಂಟರ್ಗಳಲ್ಲಿ ನಿರ್ದಿಷ್ಟ ಬ್ಯಾಂಕ್ ನೋಟುಗಳು (ಎಸ್ಬಿಎನ್) ಡಿ.30ರ ತನಕ ಓರ್ವ ವ್ಯಕ್ತಿಗೆ ಕೇವಲ ಒಂದೇ ಬಾರಿ ರೂ. 2000 ವರೆಗೆ ಹಳೇ ನೋಟು ಎಕ್ಸ್ಚೇಂಗ್ಗೆ ಅವಕಾಶ ನೀಡಲಾಗುವುದು. ಇದು ನ.18ರಿಂದ ಜಾರಿಗೆ ಬರಲಿದೆ ಎಂದು ಆರ್ಬಿಐ ಎಲ್ಲ ಸಾರ್ವಜನಿಕ, ಖಾಸಗಿ, ಪ್ರಾದೇಶಿಕ ಗ್ರಾಮೀಣ ಬ್ಯಾಮಕ್ಗಳು, ನಗರ ಮತ್ತು ರಾಜ್ಯ ಸಹಕಾರಿ ಬ್ಯಾಂಕ್ಗಳ ಅಧ್ಯಕ್ಷರು, ವ್ಯಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿವಾಹಣಾಧಿಕಾರಿಗಳಿಗೆ ನೀಡಿದ ಸೂಚನೆಯಲ್ಲಿ ತಿಳಿಸಿದೆ.
ಬ್ಯಾಂಕ್ಗಳಲ್ಲಿ ಠೇವಣಿಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಅದು ತಿಳಿಸಿದೆ.
ಅಲ್ಲದೇ ಜನ್-ಧನ್ ಖಾತೆ ಹೊಂದಿರುವವರು ನೋಟು ಬದಲಾವಣೆ ಸಂದರ್ಭ ಕಪ್ಪು ಹಣ ಬದಲಾವಣೆಗೆ ಖಾತೆಯ ದುರುಪಯೋಗ ಮಾಡಿದಲ್ಲಿ ಅವರನ್ನು ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.