ನವದೆಹಲಿ: ಆಸ್ಟ್ರೇಲಿಯಾದ ಟೆಕ್ನಿಕಲ್ ಎಂಡ್ ಫರ್ದರ್ ಎಜ್ಯುಕೇಶನ್ (ಟಿಎಎಫ್ಇ) ಸಂಸ್ಥೆಗಳು ತಮ್ಮ ೩ನೇ ಹಂತದ ಕೌಶಲ್ಯ ತರಬೇತಿ ಕಾರ್ಯಕ್ರಮ ಪ್ರಾರಂಭಿಸಲಿದ್ದು, ೨೦೨೨ರ ಒಳಗಾಗಿ ಭಾರತದಲ್ಲಿ 400 ಮಿಲಿಯನ್ ವೃತ್ತಿಪರ ತರಬೇತಿ ನಾಯಕರಿಗೆ ಕೌಶಲ್ಯ ಮತ್ತು ನಾಯಕತ್ವ ತರಬೇತಿ ನೀಡುವ ಗುರಿ ಹೊಂದಿದೆ.
ಆಸ್ಟ್ರೇಲಿಯಾ-ಭಾರತ ವೃತ್ತಿಪರ ನಾಯಕತ್ವ ಕೌಶಲ್ಯ ತರಬೇತಿ ೨೦೧೬ ಭಾರತದ ವೃತ್ತಿಪರ ತರಬೇತಿ ಸಂಸ್ಥೆಗಳ ನಾಯಕತ್ವ ಮತ್ತು ಆಯೋಜನಾ ಸಾಮರ್ಥ್ಯವನ್ನು ವೃದ್ಧಿಸುವ ದೈಷ್ಟಿಯಿಂದ ವಿನ್ಯಾಸಗೊಳಿಸಲಾಗಿದೆ.
ಭಾರತದ ಸಮುದಾಯ ಕಾಲೇಜು, ಪ್ರಧಾನ ಮಂತ್ರಿ ಕೌಶಲ ಕೇಂದ್ರ, ಕೈಗಾರಿಕಾ ತರಬೇತಿ ಸಂಸ್ಥೆಗಳು, ಮತ್ತು ಪಾಲಿಟೆಕ್ನಿಕ್ನ 120 ವೃತ್ತಿಪರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಸ್ಟ್ರೇಲಿಯಾದ ಟಿಎಎಫ್ಇ ಸಂಸ್ಥೆಗಳ ಪರಿಣಿತರು ತರಬೇತಿ ನೀಡಲಿದ್ದಾರೆ. ಇದರಿಂದ ಹೆಚ್ಚಿನ ನಾಯಕತ್ವ ಗುಣ, ಇಂಡಿಯಾಮಿಷನ್ಗೆ ಸಹಾಯಕವಾಗಲಿದೆ.
ಈ ತರಬೇತಿ ಕಾರ್ಯಕ್ರಮವು ಆಸ್ಟ್ರೇಲಿಯಾ ಸರ್ಕಾರದ ಶಿಕ್ಷಣ ಮತ್ತು ತರಬೇತಿ ಇಲಾಖೆ ಹಾಗೂ ಭಾರತದ ವಿಶ್ವವಿದ್ಯಾಲಯಗಳ ಆಯೋಗ, ಕೌಶಲ್ಯ ಮತ್ತು ಉದ್ಯೋಗ ಅಭಿವೃದ್ಧಿ, ಮತ್ತು ಭಾರತದ ತಾಂತ್ರಿಕ ಶಿಕ್ಷಣ ಇದರ ಸಹಯೋಗದಲ್ಲಿ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.