ಹೈದರಾಬಾದ್: ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪುವ ತೀರೆ ಬಡ ಜನರ ಸಂಬಂಧಿಕರ ಮೃತದೇಹದ ಸಾಗಣೆಗೆ ಅನುಕೂಲವಾಗುವಂತೆ ತೆಲಂಗಾಣ ಸರ್ಕಾರ ಶವಪೆಟ್ಟಿಗೆ ಸಾಗಣೆ ಉಚಿತ ಸೇವೆಯನ್ನು ಪ್ರಾರಂಭಸಿದೆ.
ತೆಲಂಗಾಣ ರಾಜ್ಯ ಆರೋಗ್ಯ ಸಚಿವ ಲಕ್ಷ್ಮ ರೆಡ್ಡಿ, ಮುಖ್ಯಮಂತ್ರಿ ಮೆಹಮೂದ್ ಅಲಿ ಮತ್ತು ಛಾಯಾಗ್ರಹಣ ಸಚಿವ ತಾಲಸಾನಿ ಶ್ರೀನಿವಾಸ ಯಾದವ್ ಅವರು ಹೈದರಾಬಾದ್ನ ಗಾಂಧಿ ಆಸ್ಪಪತ್ರೆಯಲ್ಲಿ ಈ ಸೇವೆಗೆ ಚಾಲನೆ ನೀಡಿದ್ದಾರೆ.
ಈ ಉಚಿತ ಸಾಗಣೆ ಸೇವೆಯ ಅಡಿಯಲ್ಲಿ ರಾಜ್ಯ ಸರ್ಕಾರ 50 ವಾಹನಗಳನ್ನು ಒದಗಿಸಿದ್ದು, ಇದು ದಿನದ 24 ಗಂಟೆ ಕಾರ್ಯ ನಿರ್ವಹಿಸಲಿವೆ.
ಈ ವಾಹನಗಳಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಹವಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ.
ಗಾಂಧಿ ಆಸ್ಪತ್ರೆ, ಒಸ್ಮಾನಿ೮ಯಾ ಆಸ್ಪತ್ರೆ ಮತ್ತಿತರ ಆಸ್ಪತ್ರೆಗಳಿಗೆ ಪ್ರತ್ಯೇಕವಾಗಿ 10 ವಾಹನಗಳನ್ನು ಒದಗಿಸಲಾಗಿದ್ದು, 11 ವಾಹನಗಳನ್ನು ಅಗತ್ಯ ಸಂದರ್ಭಗಳಲ್ಲಿ ಬಳಸು ಮೀಸಲಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.