ನವದೆಹಲಿ : ನವೆಂಬರ್ 19 ರಂದು ಬ್ಯಾಂಕ್ಗಳಲ್ಲಿ ಹಿರಿಯ ನಾಗರಿಕರು ಮತ್ತು ಆಯಾ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಹಣ ಬದಲಾವಣೆಗೆ ಅವಕಾಶ ನೀಡಲಾಗಿದೆ. ನಾಳೆ ನವೆಂಬರ್ 20 ರ ಭಾನುವಾರದಂದು ಬ್ಯಾಂಕ್ಗಳಿಗೆ ರಜೆ ಇರಲಿದೆ.
ಬ್ಯಾಂಕ್ಗಳ ಎದುರು ನೂಕುನುಗ್ಗಲು ತಪ್ಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇಂದು ಹಿರಿಯ ನಾಗರಿಕರು ಮತ್ತು ಆಯಾ ಬ್ಯಾಂಕ್ ಗ್ರಾಹಕರಿಗೆ ಮಾತ್ರ ಹಣ ಬದಲಾವಣೆಗೆ ಅವಕಾಶ ನೀಡಿದೆ. ಇತರೆ ಬ್ರಾಂಚ್ಗಳ ಗ್ರಾಹಕರು ಹಾಗೂ ಇತರೆ ಬ್ಯಾಂಕ್ ಗ್ರಾಹಕರಿಗೆ ನೋಟು ಬದಲಾವಣೆಗೆ ಇಂದು ಅವಕಾಶವಿಲ್ಲ.
ಕಳೆದ 2 ವಾರಗಳಿಂದ ಸತತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕ್ ಸಿಬ್ಬಂದಿಗಳಿಗೆ ನವೆಂಬರ್ 20 ರ ಭಾನುವಾರ ರಜೆ ನೀಡಲಾಗಿದೆ. ಹೀಗಾಗಿ ನಾಳೆ ಬ್ಯಾಂಕಿನ ಯಾವುದೇ ಕಾರ್ಯಚಟುವಟಿಕೆಗಳು ನಡೆಯುವುದಿಲ್ಲ. ಗ್ರಾಹಕರು ಇಂದು ತಮ್ಮ ತಮ್ಮ ಬ್ಯಾಂಕ್ಗಳಲ್ಲಿ ಮಾತ್ರ ಹಣ ಬದಲಾವಣೆ ಮತ್ತು ಠೇವಣಿಯನ್ನು ಮಾಡಬಹುದು. ಇತರೆ ಬ್ಯಾಂಕ್ ಅಥವಾ ಬ್ರಾಂಚ್ಗಳಲ್ಲಿ ಸೇವೆ ಲಭ್ಯವಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.