ನವದೆಹಲಿ : ಗ್ರೀನ್ಪೀಸ್ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ವಾಯುಮಾಲಿನ್ಯದ ಕಾರಣದಿಂದಾಗಿ ಕಳೆದ ವರ್ಷ ಭಾರತದಲ್ಲಿ ಚೀನಾಗಿಂತ ಹೆಚ್ಚಿನ ಸಾವು ಸಂಭಸಿವೆ ಎಂದು ವರದಿ ಮಾಡಿದೆ.
Global Burden of Diseases study ಮಾಹಿತಿಗಳ ಪ್ರಕಾರ ಸರಕಾರವು ವಾಯುಮಾಲಿನ್ಯದ ವಿರುದ್ಧ ಸರಿಯಾದ ಕ್ರಮಗಳನ್ನು ಕೈಗೊಳ್ಳದ ಕಾರಣ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ.
ಹೊರಾಂಗಣ ವಾಯುಮಾಲಿನ್ಯದಿಂದಾಗಿ 2015 ರಲ್ಲಿ ಚೀನಾದಲ್ಲಿ 3,233 ಜನ ಮೃತಪಟ್ಟಿದ್ದರೆ ಭಾರತದಲ್ಲಿ 3,288 ಜನರು ಮೃತಪಟ್ಟಿದ್ದಾರೆ.
ಹೊರಾಂಗಣದಲ್ಲಿ ತೆರೆದುಕೊಂಡಿರುವ ವಾಯುಮಾಲಿನ್ಯ ಹಾಗೂ ಅಕಾಲಿಕವಾಗಿ ಸಂಭವಿಸುತ್ತಿರುವ ಮರಣಗಳಿಗೆ ನೇರ ಸಂಬಂಧವಿದೆ ಎಂದು ಅಧ್ಯಯನ ಹೇಳಿದೆ.
ವಾಯುಮಾಲಿನ್ಯವನ್ನು ನಿಭಾಯಿಸಲು ಚೀನಾ ತೆಗೆದುಕೊಂಡ ನಿರ್ಧಾರಗಳಿಂದ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ 2015 ರಲ್ಲಿ ಭಾರತದಲ್ಲಿ ವಾಯುಮಾಲಿನ್ಯದಿಂದಾಗಿ ಅಕಾಲಿಕ ಸಾವಿನ ಪ್ರಮಾಣ ಹೆಚ್ಚಾಗಿದ್ದು ಇದೊಂದು ಆಶ್ಚರ್ಯಕರ ದಾಖಲೆಯಾಗಿದೆ ಎಂದು ಗ್ರೀನ್ಪೀಸ್ನ ಚಳುವಳಿಗಾರ ಸುನಿಲ ದಹಿಯಾ ಹೇಳಿದ್ದಾರೆ.
ವಾಯುಮಾಲಿನ್ಯದಿಂದಾಗಿ ಭಾರತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. 1990 ರಲ್ಲಿ 2,100, 2000 ರಲ್ಲಿ 2,509 ಮತ್ತು 2010 ರಲ್ಲಿ 2,865 ಇದ್ದ ಸಾವಿನ ಪ್ರಮಾಣ ಕೇವಲ 5 ವರ್ಷಗಳಲ್ಲಿ 3,288 ಕ್ಕೆ ಏರಿಕೆಯಾಗಿದೆ.
ಅದರಂತೆ ಚೀನಾದಲ್ಲಿ 1990 ರಲ್ಲಿ 2,620, 2000 ರಲ್ಲಿ 3,010 ಮತ್ತು 2010 ರಲ್ಲಿ 3,100 ರಷ್ಟು ಸಾವು ಸಂಭವಿಸಿದೆ. ಈ ಅಂಕಿ-ಅಂಶಗಳ ಪ್ರಕಾರ ಚೀನಾದಲ್ಲಿ ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಾಯುಮಾಲಿನ್ಯವಿರುವುದು ಕಂಡು ಬರುತ್ತದೆ ಆದರೆ 2015 ರ ಅಂಕಿಯು ಭಾರತದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದನ್ನು ಖಚಿತಪಡಿಸುತ್ತದೆ.
ಚೀನಾದಲ್ಲಿ ಬೆಳೆಯುತ್ತಿರುವ ಪಳಿಯುಳಿಕೆ ಇಂಧನದ ಬಳಕೆಯ ಕಾರಣ ವಾಯುಮಾಲಿನ್ಯ ಕಡಿಮೆಯಾಗಿದೆ. ಚೀನಾದಲ್ಲಿ 2005 ರಿಂದ 2011 ರ ಅವಧಿಯಲ್ಲಿ ಮಾಲಿನ್ಯದ ಮಟ್ಟವು 20 %ರಷ್ಟು ಏರಿಕೆಯಾಗಿತ್ತು. ಆದರೆ ಇದೀಗ ಇಂತಹ ಸ್ಥಿತಿ ಭಾರತಕ್ಕೆ ಒದಗಿದ್ದು, ವಾಯುಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನದಲ್ಲಿ ಸಾಕಷ್ಟು ಕೊರತೆಯಿದೆ. ಚೀನಾದಲ್ಲಿ 2011 ರ ನಂತರ ನ್ಯಾಷನಲ್ ಪಾಲಿಸಿ ಜಾರಿಗೆ ಬಂದ ನಂತರ ಕಲ್ಲಿದ್ದಲು ಸ್ಥಾವರಗಳು ಮತ್ತು ವಾಹನ ಸಂಚಾರಗಳನ್ನು ನಿಯಂತ್ರಿಸುವ ಮೂಲಕ ವಾಯುಮಾಲಿನ್ಯ ಕಡಿಮೆ ಮಾಡಲಾಯಿತು.
ಭಾರತದಲ್ಲಿ ವಾಯುಮಾಲಿನ್ಯವನ್ನು ನಿಭಾಯಿಸಲು ಸಮಗ್ರ ಯೋಜನೆ ರೂಪಿಸದೇ ಇದ್ದರೇ, ತನ್ನ ದಾಖಲೆಗಳನ್ನು ತಾನೇ ಮುರಿಯಲಿದೆ ಎಂದು ಪರಿಸರ ತಜ್ಞರು ಅಂದಾಜಿಸಿದ್ದಾರೆ.
ಭಾರತದಲ್ಲಿ ಸಂಸ್ಥೆಗಳ ಮಧ್ಯೆ ಹೊಂದಾಣಿಕೆ ಇಲ್ಲ, ದೇಶದ ಹಲವೆಡೆ ವಾಯು ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಸಹ ಇಲ್ಲ ಎಂದು ದೆಹಲಿಯ ಐಐಟಿಯ ಆರೋಗ್ಯ ಮತ್ತು ಪರಿಸರ ನೀತಿ ಸಂಶೋಧನೆಯ ಪ್ರಾಶುಂಪಾಲ ಡಾ|| ಪದ್ಮನಾಭನ್ ಗೌಡ ಅವರು ಹೇಳಿದ್ದಾರೆ.
ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಮಾಲಿನ್ಯದ ಸಮಸ್ಯೆ ಹೆಚ್ಚಾಗಿರುತ್ತದೆ. ಕಳೆದ ವರ್ಷ ಚೀನಾವನ್ನು ಹಿಂದಿಕ್ಕಿ, ಭಾರತದ ದೆಹಲಿಯು ವಿಶ್ವದಲ್ಲಿನ ಅತೀ ವಾಯುಮಾಲಿನ್ಯವಾದ ಪಟ್ಟಣವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.