ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ನಿರ್ಮಿಸಲಾಗಿರುವ ಹೊಸ ಮಾನವರಹಿತ ವೈಮಾನಿಕ ಯುದ್ಧ ಡ್ರೋನ್ ರುಸ್ತಮ್-2 ಯಶಸ್ವಿ ಪರೀಕ್ಷೆ ನಡೆಸಿದೆ. ತಪಸ್ 201 ಅಥವಾ ರುಸ್ತಮ್-2 ಈ ಹಿಂದಿನ ರುಸ್ತಮ್-1ನ 7 ವರ್ಷಗಳ ನಂತರ ನಿರ್ಮಿಸಲಾಗಿದ್ದು, ಇದನ್ನು ಅಮೇರಿಕಾದ ಡ್ರೋನ್ಗೆ ಹೋಲಿಸಲಾಗಿದೆ.
ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಅಡಿಯಲ್ಲಿ 67 ಸಾವಿರ ಕೋಟಿ ವೆಚ್ಚದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ನಿರ್ಧರಿಸಿದೆ. ಈ ಯೋಜನೆ ಅಡಿಯಲ್ಲಿ 598 ಮಿನಿ ಮಾನವರಹಿತ ಡ್ರೋನ್ಗಳನ್ನು ಖರೀದಿಸಲಿದೆ.
ಮಧ್ಯಮ ಗಾತ್ರದ ಮಾನವರಹಿತ ಡ್ರೋನ್ ರುಸ್ತಮ್-2 ಅನ್ನು ಅಮೇರಿಕಾ ನಿರ್ಮಿತ ಪ್ರಿಡೇಟರ್ ಡ್ರೋನ್ಗೆ ಹೋಲಿಸಲಾಗಿದೆ. ಇದು 24 ಗಂಟೆಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಇದು ನಿರಂತರ ಕಣ್ಗಾವಲು ನಡೆಸಲಿದ್ದು, ಶಸ್ತ್ರಾಸ್ತ್ರಗಳು ಮತ್ತು ಕಣ್ಗಾವಲು ಉಪಕರಣಗಳನ್ನು ಹೊತ್ತೊಯ್ಯಬಲ್ಲದು.
ಇದರ ವಿನ್ಯಾಸ ನಿಯತಾಂಕಗಳ ಪರೀಕ್ಷೆ ಮತ್ತು ಬಳಕೆದಾರ ಕ್ರಮಬದ್ಧತೆ ಪರೀಕ್ಷೆಗಳನ್ನು ನಡೆಸಲಾಗುವುದು. ಇದನ್ನು ಸ್ಥಳಾನ್ವೇಷಣೆ, ಕಣ್ಗಾವಲು, ಗುಪ್ತಚರ ಮತ್ತು ವೈಮಾನಿಕ ದಾಳಿಗಳನ್ನು ನಡೆಸಲು ಬಳಕೆ ಮಾಡಲಾಗುವುದು.
ಬೆಂಗಳೂರು ಮೂಲದ ರಕ್ಷಣಾ ಸಂಶೋಧನೆಅಭಿವೃದ್ಧಿ ಸಂಸ್ಥೆಯ ಏರೋನಾಟಿಕಲ್ ಡೆವೆಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಇದನ್ನು ವಿನ್ಯಾಸಗೊಳಿಸಿದೆ. 2 ಟನ್ ತೂಕದ ಈ ಡ್ರೋನ್ಗೆ ತಪಸ್ 201 ಎಂದು ಮರು ನಾಮಕರಣ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.