ಢಾಕಾ: ವಿಶ್ವದ ಲಕ್ಷಾಂತರ ಜನರ ಉಳಿವಿಗಾಗಿ ಪ್ಯಾರಿಸ್ ಒಪ್ಪಂದ ಅನುಷ್ಠಾನಗೊಳ್ಳುವುದು ಬಹು ಅಗತ್ಯ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಹವಾಮಾನ ಬದಲಾವಣೆ ವಿಚಾರದ ನಮ್ಮ ಬದ್ಧತೆಯನ್ನು ಕಾರ್ಯರೂಪಕ್ಕೆ ತರದಿದ್ದಲ್ಲಿ ಲಕ್ಷಾಂತರ ಜನರ ಜೀವ ಮತ್ತು ಜೀವನಾಧಾರ ಹಾನಿಗೆ ಒಳಗಾಗಲಿದೆ ಎಂದು ಅವರು ಹೇಳಿರುವುದಾಗಿಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಬಾಂಗ್ಲಾದೇಶ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ ಅಂಗೀಕರಿದ ಮೊದಲ ರಾಷ್ಟ್ರವಾಗಿದೆ.
ಮೊರೊಕ್ಕೋದ ಮರಾಕ್ಕೆಚ್ನಲ್ಲಿ ನಡೆದ ಕಾಂಫರೆನ್ಸ್ ಆಫ್ ಪಾರ್ಟೀಸ್ನಲ್ಲಿ ಮಾತನಾಡುತ್ತಿದ್ದ ಅವರು, ಮರಕ್ಕೆಚ್ ಹವಾಮಾನ ಸಮ್ಮೇಳನ ವಿಶೇಷ ಪ್ರಾಮುಖ್ಯತೆ ಪಡೆದಿದ್ದು, ಪ್ಯಾರಿಸ್ ಒಪ್ಪಂದ ಈ ವರ್ಷ ಜಾರಿಗೆ ಬರುವ ನಿರೀಕ್ಷೆ ಇದೆ. ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಈ ಸಹಕಾರ ಒಪ್ಪಂದ ಸಹಕಾರಿಯಾಗಲಿದೆ. ಇದು ಜಾರಿಗೆ ತಂದಿರುವ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವ ಸಮಯವಾಗಿದೆ ಎಂದು ಹಸೀನಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.