ನವದೆಹಲಿ: 2017ರಲ್ಲಿ ಭಾರತದಲ್ಲಿ ಶೇ.10ರಷ್ಟು ಸಂಬಳ ಏರಿಕೆಯಾಗುವ ಬಗ್ಗೆ ನಿರೀಕ್ಷಿಸಲಾಗಿದ್ದು, ಉತ್ತಮ ನಿರ್ವಹಣೆ ತೋರುವ ವೃತ್ತಿಪರರು ಹೆಚ್ಚಿನ ಆಕರ್ಷಣೆಯಾಗಲಿದ್ದಾರೆ. ಕಂಪೆನಿಗಳು ಅಂತಹವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ವರದಿ ತಿಳಿಸಿದೆ.
ಜಾಗತಿಕ ಸಲಹೆ, ದಲ್ಲಾಳಿ ಮತ್ತು ಪರಿಹಾರ ಆಧಾರಿತ ಕಂಪೆನಿ ವಿಲ್ಲಿಸ್ ಟವರ್ಸ್ ವಾಟ್ಸನ್ ಬಿಡುಗಡೆ ಮಾಡಿದ 2016- ಸಂಬಳ ಬಜೆಟ್ ಯೋಜನೆ ವರದಿ ಪ್ರಕಾರ 2016ರಂತೆ 2017ರಲ್ಲೂ ಭಾರತದಲ್ಲಿ ನೌಕರರ ಸಂಬಳ ಶೇ.10ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿದೆ.
ಭಾರತದ ಸರಾಸರಿ ಹಣದುಬ್ಬರ ಶೇ.5.7 ಗಣನೆಗೆ ತೆಗೆದುಕೊಳ್ಳಲಾಗಿದ್ದು, 2016ರಲ್ಲಿ ಯೋಜಿತ ಹೆಚ್ಚಳ ಶೇ.4.4 ಇದ್ದು, ಇದು 2017ರಲ್ಲಿ ಶೇ.4.3 ಇರಲಿದೆ ಎನ್ನಲಾಗಿದೆ.
ಉತ್ತಮ ನಿರ್ವಹಣೆ ತೋರುವ ನೌಕಕರು ಬಜೆಟ್ನ ಸಂಬಳ ಏರಿಕೆಯ ಶೇ.38ರಷ್ಟು ಪಡೆಯಲಿದ್ದಾರೆ. ಸಾಧಾರಣ ನಿರ್ವಹಣೆಗಿಂತ ಹೆಚ್ಚಿನ ಕ್ಷಮತೆ ತೋರಿದ ನೌಕರರ ಸಂಬಳದಲ್ಲಿ ಶೇ.34ರಷ್ಟು ಏರಿಕೆ ಕಂಡರೆ, ಸಾಧಾರಣ ನಿರ್ವಹಣೆ ತೋರುವ ನೌಕರರ ಪಾಲು ಶೇ.28 ಇರಲಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.