ನವದೆಹಲಿ: ಮುಂದಿನ ಹಣಕಾಸು ವರ್ಷದಿಂದ ಅಧಿಕಾರಿಗಳ ಕಾರ್ಯಕ್ಷಮತೆಯ ವರದಿಯನ್ನು ಆನ್ಲೈನ್ಗೆ ನಮೂದಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಕಡ್ಡಯಗೊಳಿಸಿದೆ.
ತಡವಾಗಿ ಸಲ್ಲಿಸಲಾಗುತ್ತಿರುವ ಅಧಿಕಾರಿಗಳ ಗೌಪ್ಯ ವರದಿಗಳನ್ನು ಪರಿಶೀಲಿಸಲು ಈ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದೇಶಿಸಿದ್ದಾರೆ.
ವಾರ್ಷಿಕ ಕಾರ್ಯಕ್ಷಮತೆ ಅಪ್ರೈಸಲ್ ವರದಿಯನ್ನು ಡಿಸೆಂಬರ್ 31ರ ಒಳಗಾಗಿ ದಾಖಲಿಸದಿದ್ದಲ್ಲಿ ಅಧಿಕಾರಿಗಳ ಒಟ್ಟಾರೆ ದಾಖಲೆ ವರದಿಗಳ ಮೌಲ್ಯಮಾಪನ ನಡೆಸಲು ನಿರ್ಣಯಿಸಲಾಗಿದೆ.
ಸಿಬ್ಬಂದಿ ಮತ್ತು ತೆರಬೇತಿ ಇಲಾಖೆ ಈ ನಿಟ್ಟಿನಲ್ಲಿ ಗೃಹ ಸಚಿವಾಲಯ (ಭಾರತೀಯ ಪೊಲೀಸ್ ಸೇವೆ), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಯ (ಭಾರತೀಯ ಅರಣ್ಯ ಸೇವೆ), ಸಾರ್ವಜನಿಕ ಉದ್ಯಮ ಇಲಾಖೆ, ಆರ್ಥಿಕ ಸೇವೆ ಇಲಾಖೆ (ಸಾರ್ವಜನಿಕ ಬ್ಯಾಂಕ್ಗಳು), ಮತ್ತಿತರ ಕೇಡರ್ ನಿಯಂತ್ರಣ ಇಲಾಖೆಗಳಿಗೆ ಪತ್ರ ಬರೆದಿದೆ.
ಇಲಾಖೆಗಳು 2017ರ ಹಣಕಾಸು ವರ್ಷದಿಂದ ವಾರ್ಷಿಕ ಗೌಪ್ಯ ವರದಿ ಮತ್ತು ಎಪಿಎಆರ್ ಕಡ್ಡಾಯವಾಗಿ ಆನ್ಲೈನ್ ಫೈಲಿಂಗ್ ಮಾಡಲು ಸಾಧ್ಯವಾಗಲಿದೆ ಎಂದು ಸಂಸ್ಥಾಪನಾ ಅಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.