ನವದೆಹಲಿ: ಕಾಂಗ್ರೆಸ್ ಮುಖವಾಣಿ ನ್ಯಾಶನಲ್ ಹೆರಾಲ್ಡ್ ಆನ್ಲೈನ್ ಪತ್ರಿಕೆ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಪತ್ರಿಕೆಯ ನೂತನವಾಗಿ ನೇಮಕಗೊಂಡ ಮುಖ್ಯ ಸಂಪಾದಕ ನೀಲಭ್ ಮಿಶ್ರಾ ಪತ್ರಿಕೆಯ ಸಂಸ್ಥಾಪಕ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭ ಘೋಷಿಸಿದ್ದಾರೆ.
ಪತ್ರಿಕೆಯ ಬಿಡುಗಡೆಯ ನಿರ್ದಿಷ್ಟ ದಿನಾಂಖ ಮತ್ತು ಸಮಯದ ಬಗ್ಗೆ ಮಿಶ್ರಾ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಇದರ ಆನ್ಲೈನ್ ರಚನೆಯ ಕಾರ್ಯ ಅಂತಿಮ ಹಂತ ತಲುಪಿದೆ ಎಂದು ಅವರು ತಿಳಿಸಿದ್ದಾರೆ.
ಅಸೋಸಿಯೇಶನ್ ಜರ್ನಲ್ಸ್ ಲಿಮಿಟೆಡ್, ಲಾಭರಹಿತ ಕಂಪೆನಿಯ ಸ್ಪೂರ್ತಿದಾಯಕ ಪ್ರಕಟಣೆಗೆ ‘ಸ್ವಾತಂತ್ರ್ಯ ಗಂಡಾಂತರದಲ್ಲಿದೆ, ನಿಮ್ಮ ಶಕ್ತಿಯಿಂದ ಅದನ್ನು ರಕ್ಷಿಸಿ’ ಎಂಬ ಟ್ಯಾಗ್ಲೈನ್ ನೀಡಲಾಗಿದೆ.
ಪಂಡಿತ್ ಜವಾಹರ್ ಲಾಲ್ ನೆಹರು ಅವರು 1937ರಲ್ಲಿ ಸ್ಥಾಪಿಸಿದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪೆನಿಯ ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆಗಳಾದ ನ್ಯಾಶನಲಕ್ ಹೆರಾಲ್ಡ್ ಮತ್ತು ನವಜೀವನ್ ಮರು ಪ್ರಕಟಣೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಜೆಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾಂಗ್ರೆಸ್ನ ಖಜಾಂಚಿ ಮೋತಿಲಾಲ್ ವೋರಾ ತಿಳಿಸಿದ್ದಾರೆ.
ನ್ಯಾಶನಲ್ ಹೆರಾಲ್ಡ್ ಪತ್ರಿಕೆ 2008ರಲ್ಲಿ ಸ್ಥಗಿತಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.