ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಜಪಾನ್ ಪ್ರಧಾನಿ ಶಿನ್ಝೋ ಅಬೆ ಅವರನ್ನು ಭೇಟಿ ಮಾಡಿದ್ದು, ಈ ಇಬ್ಬರು ಮಹತ್ವದ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಮೋದಿ ಅವರು ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕಮಾತನಾಡುತ್ತ, ಈ ಪಾಲುದಾರಿಕೆ ಕೇವಲ ನಮ್ಮ ಸಮಾಜದ ಒಳ್ಳೆಯತನ ಮತ್ತು ಭದ್ರತೆಯ ಭಾಗವಲ್ಲ. ಇದು ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮತೋಲನವನ್ನು ತರಲಿದೆ ಎಂದು ಹೇಳಿದ್ದಾರೆ.
ನ್ಯೂಕ್ಲಿಯರ್ ಸಪ್ಲಯರ್ಸ್ ಗ್ರೂಪ್ (ಎನ್ಎಸ್ಜಿ)ಗೆ ಭಾರತದ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ್ದಕ್ಕಾಗಿ ಪ್ರಧಾನಿ ಅಬೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಈ ವೇಳೆ ಪ್ರಧಾನಿ ಮೋದಿ ಹೇಳಿದ್ದಾರೆ.
ಪರಮಾಣು ಶಕ್ತಿಯ ಶಾಂತಿಯುತ ಬಳಕೆ ಮತ್ತು ಇದು ಪಾರದರ್ಶಕ ಶಕ್ತಿ ನಿರ್ಮಾಣಕ್ಕೆ ಈ ಸಹಕಾರ ಒಪ್ಪಂದ ಐತಿಹಾಸಿಕ ಮಹತ್ವ ಪಡೆದಿದೆ ಎಂದು ಅವರು ಹೇಳಿದ್ದಾರೆ.
ಭಾರತ-ಜಪಾನ್ ನಡುವೆ 6 ವರ್ಷಗಳ ನಂತರದ ಮೊದಲ ಒಪ್ಪಂದ ಇದಾಗಿದೆ.
ಆಪಾನ್ ಜೊತೆಗಿನ ಈ ಒಪ್ಪಂದ ಜಪಾನ್ನ ಪರಮಾಣು ರಫ್ತು ತಂತ್ರಜ್ಞಾನ, ಪರಮಾಣು ರಿಯಾಕ್ಟರ್, ಇಂಧನವನ್ನು ಭಾರತಕ್ಕೆ ತರಲಿದೆ. ಇದು ಅಮೇರಕಾ, ಫ್ರಾನ್ಸ್ ಮತ್ತಿತರ ದೇಶಗಳ ಜೊತೆ ಅಣು ಒಪ್ಪಂದಕ್ಕೆ ಮಹತ್ವದ ಹೆಜ್ಜೆಯಾಗಿರಲಿದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.