ನವದೆಹಲಿ: ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಜಿಎಸ್ಟಿ ಸಂಬಂಧಿತ 3, ಬಾಡಿಗೆ ತಾಯ್ತನ ನಿಯಂತ್ರಣ ಸೇರಿದಂತೆ ಸುಮಾರು 9 ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ.
ಕೇಂದ್ರ ಸೇವಾ ಮತ್ತು ತೆರಿಗೆ ಬಿಲ್, ಇಂಟೀಗ್ರೇಟೆಟ್ ಸೇವಾ ಮತ್ತು ತೆರಿಗೆ ಬಿಲ್, ಸರಕು ಮತ್ತು ಸೇವಾ ತೆರಿಗೆ ಬಿಲ್ (ಕಂದಾಯ ನಷ್ಟ ಪರಿಹಾರ) ಮೊದಲಾದ ಮೂರು ಜಿಎಸ್ಟಿ ಮಸೂದೆ ಬಿಲ್ ಪರಿಚಯಿಸಲು ಮುಂದಾಗಿದೆ.
ಚಳಿಗಾಲದ ಸಂಸತ್ ಅಧಿವೇಶನ ನವೆಂಬರ್ 16ರಿಂದ ಆರಂಭವಾಗಲಿದೆ. ಬಾಡಿಗೆ ತಾಯ್ತನ ಪ್ರಕ್ರಿಯೆ ಮತ್ತು ಅಭ್ಯಾಸ ನಿಯಂತ್ರಣಕ್ಕಾಗಿ ರಾಷ್ಟಟ್ರೀಯ ಮಂಡಳಿ, ರಾಜ್ಯ ಮಂಡಳಿಗಳನ್ನು ಆರಂಭಿಸಲಾಗುವುದು. ಇದರ ಸೂಕ್ತ ಅಧಿಕಾರಿಗಳ ನೇಮಕಾತಿಜೆ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆನ್ನೂ ಪರಿಚಯಿಸಲಿದೆ.
ಅಧಿವೇಶನದ ಸಂದರ್ಭ ತ್ರಿಪಲ್ ತಲಾಖ್ ವಿಚಾರವನ್ನೂ ಚರ್ಚಿಸಲಾಗುವುದು.
ಎಚ್ಐವಿ, ಏಡ್ಸ್ ತಡೆ ಮತ್ತು ನಿಯಂತ್ರಣ ಮಸೂದೆ, ಮಾನಸಿಕ ಆರೋಗ್ಯ ಮಸೂದೆ, ಮಾತೃತ್ವ ಲಾಭ (ತಿದ್ದುಪಡಿ) ಮಸೂದೆ, ಭ್ರಷ್ಟಾಚಾರ ತಡೆ (ತಿದ್ದುಪಡಿ) ಮಸೂದೆ ಮತ್ತಿತರ ಮಸೂದೆಗಳನ್ನು ಸಂಸತ್ನಲ್ಲಿ ಪರಿಚಯಿಸಲಾಗಿದ್ದು, ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ.
ಇದರ ಜೊತೆಗೆ ಇಂಡಿಯನ್ ಇನ್ಸ್ಟಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಶಾಸನಬದ್ಧ ಸ್ಥಾನಮಾನದ ಮಸೂದೆ ಮತ್ತು ಡಿಗ್ರಿ ಪ್ರಶಸ್ತಿ ಸೇರಿದಂತೆ 6 ಮಸೂದೆಗಳನ್ನು ಪರಿಚಯಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.