ಶಿಮ್ಲಾ: ಎರಡು ಬಾರಿಯ ಲಿಮ್ಕಾ ವಿಶ್ವ ದಾಖಲೆ ವಿಜೇತೆ, ಸಾಂಸ್ಕೃತಿಕ ನೃತ್ಯಗಾರ್ತಿ ಶ್ರುತಿ ಗುಪ್ತಾ ಅವರು ಸೈನಿಕರ ಸ್ಫೂರ್ತಿ ಹೆಚ್ಚಿಸಲು ಸಮುದ್ರ ಮಟ್ಟದಿಂದ 18,380 ಅಡಿ ಎತ್ತರದಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ.
ಶಾಂತಿ ಮತ್ತು ಸಮರಸತೆಯನ್ನು ಬೆಂಬಲಿಸುವ ಶ್ರುತಿ ಗುಪ್ತಾ, ಮೂಲತಃ ಶಿಮ್ಲಾದವರಾಗಿದ್ದು, ಅಲ್ಲಿಯ ಮೈನಸ್ 24 ಡಿಗ್ರಿ ಚಳಿಯಲ್ಲೂ 20 ನಿಮಿಷಗಳ ಕಾಲ ಕಥಕ್ ನೃತ್ಯ ಪ್ರದರ್ಶಿಸಿರುವುದು ವಿಶೇಷ.
ಇಂಡೋ-ಚೀನಾ ಗಡಿಯ ಭಾರತ-ಟಿಬೆಟ್ ಗಡಿ ಪೊಲೀಸ್ನ ಖರ್ದುಂಗ ಪಾಸ್ ಮತ್ತು ಹಿಮಾಚಲ ಪ್ರದೇಶದ ಲಹುಲ್ ಸ್ಪಿತಿ ಜಿಲ್ಲೆಯಲ್ಲಿ ಕಥಕ್ ಪ್ರದರ್ಶಿಸಿರುವ ಅವರು, ಹಿಮಾಚಲ ಪ್ರದೇಶ ಗವರ್ನರ್ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿದ್ದಾರೆ. ಶ್ರುತಿ ಅವರು ಈ ಪ್ರದೇಶದಲ್ಲಿ ಸಾಂಸ್ಕೃತಿಕ ಪ್ರಚಾರಕ್ಕಾಗಿ ಹೆಚ್ಚಿನ ಯುವತಿಯರನ್ನು ಪ್ರೇರೇಪಿಸುವ ಯೋಜನೆ ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.