ನವದೆಹಲಿ: ರೂ.500 ಮತ್ತು ರೂ.1000 ರದ್ದುಗೊಳಿಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಕ್ಷಾಂತರ ಜನರು ಬ್ಯಾಂಕ್ಗೆ ತೆರಳಿ ನೋಟುಗಳ ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸುವಲ್ಲಿ ಸರ್ಕಾರದ ಪ್ರಯತ್ನಕ್ಕೆ ಜನರು ಸಾಥ್ ನೀಡಿರುವ ಬಗ್ಗೆ ಜನರು ತೋರುತ್ತಿರುವ ತಾಳ್ಮೆಗೆ ಪ್ರಧಾನಿ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂತೋಷವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
‘ಒಂದು ಉತ್ತಮ ಯೋಜನೆಗೆ ಆಗಿರುವ ಸೀಮಿತ ಅನಾನುಕೂಲಕ್ಕೆ ಜನರು ತೋರಿದ ಉತ್ಸಾಹ ಮತ್ತು ತಾಳ್ಮೆಯಿಂದ ಸಂತೋಷವಾಗಿದೆ. ನಾಗರಿಕರು ಬ್ಯಾಂಕ್ನವರಿಗೆ ತೋರುತ್ತಿರುವ ಕೃತಜ್ಞತೆ ಮತ್ತು ನೋಟುಗಳ ಬದಲಾಣೆಗೆ ತೋರುತ್ತಿರುವ ತಾಳ್ಮೆ ಮತ್ತು ಕ್ರಮಬದ್ಧ ವಿಧಾನದ ವಿನಿಮಯದ ಬಗ್ಗೆ ತಿಳಿದು ಖುಷಿಯಾಗಿದೆ. ಸ್ವ-ಇಚ್ಛೆಯಿಂದ ಹಿರಿಯ ನಾಗರಿಕರು ನೋಟುಗಳ ಬದಲಾವಣೆಗೆ ಮಾಡಲು ಅವರಿಗೆ ಸಹಾಯ ಮಾಡುತ್ತಿರುವವರ ಸ್ಫೂರ್ತಿ ನೋಡಿ ಸಂತೋಷವಾಗುತ್ತಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಭ್ರಷ್ಟಾಚಾರ ಮುಕ್ತ ಭಾರತದ ರಚನೆಯ ಪ್ರಯತ್ನಗಳಿಗೆ ಬದ್ಧವಾಗಿದೆ. ಅಭಿವೃದ್ಧಿಯ ಫಲ ಪ್ರತಿಯೊಬ್ಬ ನಾಗರಿಕನೂ ಪಡೆಯಲಿದ್ದಾನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
So happy to learn that citizens are expressing their gratitude to bankers & getting notes exchanged in a very patient & orderly manner.
— Narendra Modi (@narendramodi) November 10, 2016
It is also heartening to learn that people are actively volunteering to help senior citizens withdraw money & exchange their currency.
— Narendra Modi (@narendramodi) November 10, 2016
I assure you the Govt is unwavering in its effort to create an India that is corruption free & fruits of development touch every citizen.
— Narendra Modi (@narendramodi) November 10, 2016
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.