ನವದೆಹಲಿ: ಪಾಕಿಸ್ಥಾನ ರಾಯಭಾರವು ಭಾರತೀಯ ಸಿಖ್ ಯಾತ್ರಿಗಳಿಗೆ ಗುರುನಾನಕ್ ದೇವ್ ಜೀ ಜಯಂತಿಯಲ್ಲಿ ಪಾಲ್ಗೊಳ್ಳಲು ಸುಮಾರು 3,316 ವೀಸಾಗಳನ್ನು ಜಾರಿಗೊಳಿಸಿದೆ. ಗುರುನಾನಕ್ ದೇವ್ ಜೀ ಜಯಂತಿಯು ನವೆಂಬರ್ 12 ರಿಂದ ನವೆಂಬರ್ 21ರ ವರೆಗೆ ನಡೆಯಲಿದೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನದೊಂದಿಗೆ ಜನರ ನಡುವಿನ ಸಂಪರ್ಕ ಬಾಂಧವ್ಯವನ್ನು ಪ್ರೋತ್ಸಾಹಿಸುವ ಭಾಗವಾಗಿ ಪಾಕಿಸ್ಥಾನ ಈ ಕ್ರಮ ಕೈಗೊಂಡಿದೆ. 1974 ರ ದ್ವಿಪಕ್ಷೀಯ ಮಾತುಕತೆಯ ಶಿಫಾರಸ್ಸಿನಲ್ಲಿ ನಮೂದಿಸಿದ್ದಕ್ಕಿಂತ ಹೆಚ್ಚು ವೀಸಾಗಳನ್ನು ಈ ಬಾರಿ ಪಾಕಿಸ್ಥಾನ ರಾಯಭಾರ ಸಿಖ್ ಯಾತ್ರಿಗಳಿಗೆ ನೀಡಿದೆ ಎಂದು ಪಾಕಿಸ್ಥಾನ ರಾಯಭಾರದ ಸಲಹೆಗಾರ ಮನ್ಸೂರ್ ಅಲಿ ಮೆಮೊನ್ ದೆಹಲಿಯ ಪಾಕಿಸ್ಥಾನ ರಾಯಭಾರ ಕಚೇರಿಯಲ್ಲಿ ಹೇಳಿದ್ದಾರೆ
ಗುರುನಾನಕ್ ದೇವ್ ಜೀ ಅವರು ಎ.15, 1469ರಲ್ಲಿ ರಾಯ್ ಭೋಯ್ ಕಿ ತಲ್ವಾ, ಪ್ರಸ್ತುತ ಪಾಕಿಸ್ಥಾನದ ಲಾಹೋರ್ನ ಪಂಜಾಜ್ ಪ್ರಾಂತ್ಯದ ನಾನ್ಕನ ಸಾಹಿಬ್ನಲ್ಲಿ ಜನಿಸಿದ್ದರು.
ಪ್ರತಿ ವರ್ಷವೂ ಅತಿ ಹೆಚ್ಚು ಸಂಖ್ಯೆಯಲ್ಲಿ ಸಿಖ್ ಯಾತ್ರಿಕರು ಪಾಕಿಸ್ಥಾನಕ್ಕೆ ತೆರಳಿ ಅಲ್ಲಿನ ಸಿಖ್ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.