ನವದೆಹಲಿ : ಮೋದಿ ಮಂಗಳವಾರ ರಾತ್ರಿ ನಿಖರವಾಗಿ ಹೊರಡಿಸಿದ ಆದೇಶದಂತೆ, ಇನ್ನು ಮುಂದೆ ರೂ. 500, 1000 ರೂ. ನೋಟುಗಳ ಮುದ್ರಣ ನಿಂತಿದ್ದು ಹೊಸದಾಗಿ ಆರ್ಬಿಐ 500, 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದು ಜನತೆಗೆ ನ. 10 ರ ನಂತರ ಈ ನೋಟುಗಳು ಸಿಗಲಿವೆ ಎಂದು ಆರ್ಬಿಐ ಗವರ್ನರ್ ಊರ್ಜಿತ್ ಪಟೆಲ್ ತಿಳಿಸಿದ್ದಾರೆ.
ಜನರು ಯಾವುದೇ ಸುಳ್ಳು ವದಂತಿಗೆ ಕಿವಿಗೊಡದೆ ಆರ್ಬಿಐ ಹೊಸ ನೋಟುಗಳನ್ನು ಬಿಡುಗಡೆಗೊಳಿಸುವವರೆಗೆ ಸಹಕರಿಸಬೇಕೆಂದು ತಿಳಿಸಿದ್ದಾರೆ.
ಹೊಸ 2000 ರೂ. ಮುಖಬೆಲೆಯ ನೋಟು ಗುಲಾಬಿ(ಪಿಂಕ್) ಬಣ್ಣದಾಗಿದ್ದು, ಇದರ ಹಿಂಭಾಗದಲ್ಲಿ ಮಂಗಳಯಾನದ ಚಿತ್ರ ಇರುವುದು. ಮತ್ತು 500 ರೂ. ಮುಖಬೆಲೆಯ ನೋಟು ತಿಳಿಹಸಿರು ಬಣ್ಣದಾಗಿದ್ದು, ಇದರ ಹಿಂಭಾಗದಲ್ಲಿ ದಿಲ್ಲಿಯ ಕೆಂಪು ಕೋಟೆಯ ಚಿತ್ರ ಹೊಂದಿರುತ್ತದೆ ಎಂದು ಹೇಳಲಾಗಿದೆ. ಹೊಸ ನೋಟುಗಳ ಬೆಲೆಯನ್ನು 15 ಭಾಷೆಗಳಲ್ಲಿ ಬರೆಯಲಾಗಿರುತ್ತದೆ, ಅಲ್ಲದೇ ಇದು ಗಾಂಧೀಜಿಯವರ ಭಾವಚಿತ್ರ ಮತ್ತು ಸ್ವಚ್ಛಭಾರತದ ಲೋಗೊ ಹೊಂದಿರುತ್ತದೆ ಎಂದು ಆರ್ಬಿಐ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಮತ್ತು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರ ಇಲಾಖೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದ್ದು ಹಣಕಾಸು ವಾಹಿವಾಟಿಗೆ ಸಹಕಾರಿಯಾಗಲಿವೆ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.