ವಾಷಿಂಗ್ಟನ್ : ಅಮೆರಿಕದ ಸಂಸತ್ತಿಗೆ ಚುನಾಯಿತರಾಗಿರುವ ಮೊದಲ ಭಾರತೀಯ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಕ್ಯಾಲಿಫೋರ್ನಿಯದ ಕಮಲಾ ಹ್ಯಾರಿಸ್ ಅವರು ಪಾತ್ರರಾಗಿದ್ದು, ಈ ಮೂಲಕ ಇತಿಹಾಸ ಬರೆದಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿ ಲೊರೆಟಾ ಸ್ಯಾಂಚೆಸ್ ಅವರನ್ನು ಸೋಲಿಸುವುದರ ಮೂಲಕ ಕ್ಯಾಲಿಫೋರ್ನಿಯಾ ಕ್ಷೇತ್ರದಲ್ಲಿ ಪ್ರತಿನಿಧಿ ಸಭೆಗೆ ಕಮಲಾ ಹ್ಯಾರಿಸ್ ಚುನಾಯಿತರಾಗಿದ್ದಾರೆ.
52 ವರ್ಷದ ಕಮಲಾ ಹ್ಯಾರಿಸ್ ಅವರು 2010 ಮತ್ತು 2014 ರಲ್ಲಿ ಅಟಾರ್ನಿ ಜನರಲ್ಗಾಗಿ ನಡೆದಿದ್ದ ಎರಡು ಚುನಾವಣೆಗಳಲ್ಲೂ ಸ್ಪರ್ಧಿಸಿ ಜಯಗಳಿಸಿದ್ದರು.
ಭಾರತೀಯ ಅಮೇರಿಕನ್ನರಿಗೆ ಐತಿಹಾಸಿಕ ದಿನವಾಗಿದ್ದು, ಡೆಮೋಕ್ರಾಟಿಕ್ ಅಭ್ಯರ್ಥಿಯಾಗಿ ಭಾರತೀಯ ಅಮೆರಿಕನ್ ರಾಜಾ ಕೃಷ್ಣಮೂರ್ತಿ ಅವರು ಅಮೆರಿಕದ ಪ್ರತಿನಿಧಿ ಸಭೆಗೆ ಚುನಾಯಿತರಾಗಿದ್ದಾರೆ. ಇವರು ಇಲ್ಲಿನೊಯಿಸ್ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ರಿಪಬ್ಲಿಕನ್ ಅಭರ್ಥಿ ಪೀಟರ್ ಡಿ’ಸಿಯನ್ನಿ ಅವರನ್ನು ಸೋಲಿಸುವ ಮೂಲಕ ಜಯಶಾಲಿಯಾಗಿದ್ದಾರೆ. ರಾಜಾ ಕೃಷ್ಣಮೂರ್ತಿ ಅವರನ್ನು ಡೆಮೋಕ್ರಾಟಿಕ್ ಪಕ್ಷವು ಜುಲೈ ತಿಂಗಳಲ್ಲಿ ಪಕ್ಷದ ಸಮಾವೇಶದ ಸಂದರ್ಭದಲ್ಲಿ ‘New Leader of Tomorrow’ಎಂದು ಪ್ರಶಂಸಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.