ಚೆನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಿತಾ ಅವರು 15 ದಿನಗಳಲ್ಲಿ ಅಪೋಲ್ಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಎಐಎಡಿಎಂಕೆ ಹಿರಿಯ ಅಧಿಕಾರಿ ಪೊನ್ನಯನ್ ತಿಳಿಸಿದ್ದಾರೆ.
ಜಯಲಲಿತಾ ಅವರನ್ನು ಸಿಸಿಯು ಘಟಕದಿಂದ ಬೇರೆ ಕೊಠಡಿಗೆ ವರ್ಗಾಯಿಸಲಾಗಿದೆ. ತುರ್ತು ಸಾಧನಗಳ ಅಗತ್ಯತೆಯ ಕಾರಣ ಜಯಲಲಿತಾ ಅವರನ್ನು ಉತ್ತಮ ವ್ಯವಸ್ಥೆಯಿರುವ ಕೊಠಡಿಗೆ ವರ್ಗಾಯಿಲಾಗಿದ್ದು, ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಜಯಲಲಿತಾ ಅವರು ಸಂಪುರ್ಣ ಗುಣಮುಖರಾಗಿ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ಅಪೋಲ್ಲೋ ಅಸ್ಪತ್ರೆಯ ಅಧ್ಯಕ್ಷ ಸಿ.ಪ್ರತಾಪ್ ರೆಡ್ಡಿ ತಿಳಿಸಿದ್ದರು.
ಜಯಲಲಿತಾ ಅವರು ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಾಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಸಂಪೂರ್ಣ ಫಿಟ್ ಆದ ಬಳಿಕ ಮನೆಗೆ ಮರಳುವುದನ್ನು ಎಲ್ಲರೂ ಬಯಸಿದ್ದಾರೆ. ಜಯಲಲಿತಾ ಅವರು ಸ್ವಲ್ಪ ಸಮಯ ಆಸ್ಪತ್ರೆಯಲ್ಲೇ ಇದ್ದು, ಸೋಂಕು ಮರುಕಳಿಸದಂತೆ ಸಂಪೂರ್ಣ ಗುಣಮುಖರಾಗುವವರೆಗೆ ಆಸ್ಪತ್ರೆಯಲ್ಲೇ ಇರುವ ಬಗ್ಗೆ ಎಐಎಡಿಎಂಕೆ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಅವರು ಪೊನ್ನಯನ್ ಹೇಳಿದ್ದಾರೆ.
ಜಯಲಲಿತಾ ಅವರು ಘನ ಆಹಾರ ಸೇವಿಸುತಿದ್ದು 15 ದಿನಗಳಲ್ಲಿ ತಮ್ಮ ಬಿಡುಗಡೆಯಾಗಬೇಕೆಂಬುದು ನಮ್ಮೆಲ್ಲರ ಆಶಯ. ಜಯಲಿತಾ ಅವರ ಸ್ಥಿತಿ ಉತ್ತಮವಾಗಿದ್ದು, ಅವರ ಕೊಠಡಿಗೆ ವೈದ್ಯರು ಮತ್ತು ನರ್ಸ್ ಬಿಟ್ಟು ಯಾರಿಗೂ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂದು ಪೊನ್ನಯನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.