ನವದೆಹಲಿ: ಗೋಹತ್ಯೆ ನಿಷೇಧದ ಕುರಿತು ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ. ಮೊಘಲ್ ಆಳ್ವಿಕೆಯ ಸಂದರ್ಭದಲ್ಲೂ ಗೋವುಗಳ ಸಂರಕ್ಷಿಸಲಾಗುತ್ತಿತ್ತು ಎಂದು ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಗೋಹತ್ಯೆ ಮತ್ತು ಗೋಮಾಂಸವನ್ನು ವೈದಿಕ ಕಾಲದಿಂದಲೂ ನಿಷೇಧಿಸಲಾಗಿತ್ತು.
50 ವರ್ಷಗಳ ಹಿಂದೆ ಗೋಹತ್ಯೆ ನಿಷೇಧದ ಬಗ್ಗೆ ನಡೆದ ಪ್ರದರ್ಶನದ ಸಂದರ್ಭ ಹತ್ಯೆ ಮಾಡಲಾಗಿದ್ದವರನ್ನು ನೆನಪಿಸುವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೊಘಲ್ ಅರಸರಾದ ಬಹದ್ದೂರ್ ಶಾ ಝಫರ್, ಅಕ್ಬರ್, ಜಹಾಂಗೀರ್ ಕಾಲದಲ್ಲೂ ಗೋಹತ್ಯೆ ನಷೇಧಿಸಲಾಗಿತ್ತು. ಗೋಹತ್ಯೆ ನಿಲ್ಲಿಸದೇ ಎಂದಿಗೂ ಹಿಂದುಸ್ಥಾನವನ್ನು ಆಳಲು ಸಾಧ್ಯವಿಲ್ಲ ಎಂದು ‘ಬಾಬರ್ನಾಮಾ’ದಲ್ಲಿ ಬರೆಯಲಾಗಿದೆ ಎಂದು ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಹಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಲಾಗಿದ್ದು, ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ. ಇದು ಕೇವಲ ಸಾಂಸ್ಕೃತಿಕ ವಿಚಾರವಾಗದೇ ನಂಬಿಕೆಯ ವಿಷಯವೂ ಆಗಿದೆ. ಭಾರತ ಸರ್ಕಾರ ಬಾಂಗ್ಲಾದೇಶಕ್ಕೆ ಜಾನುವಾರು ಕಳ್ಳಸಾಗಣೆಯ ಸಂಪೂರ್ಣ ನಿಷೇಧವನ್ನು ಜಾರಿಗೆ ತರಲು ಎಲ್ಲ ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಇದಲ್ಲಿ ಕೇವಲ ಭಾಗಶಃ ಯಶಸ್ಸು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.