ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್ಸಿಆರ್ಎ) ಅಡಿಯಲ್ಲಿ ತಮ್ಮ ನೋಂದಣಿ ನವೀಕರಣ ಅರ್ಜಿಗಳನ್ನು ಸಲ್ಲಿಸಲು ವಿಫಲಗೊಂಡ 11 ಸಾವಿರ ಎನ್ಜಿಒಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಗೃಹ ಸಚಿವಾಲಯ ಮಾರ್ಚ್ನಲ್ಲಿ ಎನ್ಜಿಒಗಳ ನೋಂದಣಿ ನವೀಕರಣ ಅರ್ಜಿ ಸಲ್ಲಿಕೆ ಗಡುವನ್ನು ಅಕ್ಟೋಬರ್ 31ರ ವರೆಗ ವಿಸ್ತರಿಸಿತ್ತು.
ಆದರೆ ಎನ್ಜಿಒಗಳು ನೋಂದಣಿ ನವೀಕರಣ ಅರ್ಜಿಗಳನ್ನು ಜೂನ್ 30ರ ಒಳಗಾಗಿ ಸಲ್ಲಿಸಬೇಕಿತ್ತು. ಗೃಹ ಸಚಿವಾಲಯ ನೀಡಿದ ಗಡುವಿನೊಳಗೆ ಅರ್ಜಿ ಸಲ್ಲಿಸಲು ವಿಫಲಗೊಂಡ ಎನ್ಜಿಒಗಳ ಪಟ್ಟಿಯನ್ನು ಗೃಹ ಸಚಿವಾಲಯ ಬಿಡುಗಡೆಗೊಳಿಸಿದ್ದು, ಅವರ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಸಚಿವಾಲಯ ತಿಳಿಸಿದೆ.
ಈ ಎನ್ಜಿಒಗಳು ಇನ್ನು ಮುಂದೆ ವಿದೇಶಿ ದಾನಿಗಳಿಂದ ದೇಣಿಗೆ ಪಡೆಯಲು ಅಸಾಧ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.