ನವದೆಹಲಿ: ಹರ್ಯಾಣದಲ್ಲಿ ನಡೆದ ಸುವರ್ಣ ಮಹೋತ್ಸವದ ಸಂದರ್ಭ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಮೂಲಕ ಅವರ ರಕ್ಷಣೆಗೆ ಮುಂದಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದು ದಿನದ ಬಳಿಕ ಕಳೆದ ಎರಡು ದಶಕದಲ್ಲಿ ಭಾರತದಲ್ಲಿ 2.55 ಕೋಟಿ ಹೆಣ್ಣು ಭ್ರೂಣ ಹತ್ಯೆ ಸಂಭವಿಸಿರುವ ವರದಿ ಬಹಿರಂಗಗೊಂಡಿದೆ.
ಲಿಂಗ ನಿರ್ಧಾರಕ ಪರೀಕ್ಷೆಗಳ ಕಾರಣದಿಂದ 1991ರಿಂದ 2011ರ ನಡುವೆ ಪ್ರತಿ ವರ್ಷ ಸರಾಸರಿ 13 ಲಕ್ಷ ಹೆಣ್ಣು ಮಕ್ಕಳ ಹತ್ಯೆ ಸಂಭವಿಸಿದೆ. ಪೂರ್ವ ಪರಿಕಲ್ಪನೆ ಹಾಗೂ ಪೂರ್ವ ಜನನಕಾಲ ಡಯಾಗ್ನೋಸ್ಟಿಕ್ ತಂತ್ರಗಳು (PCPNDT) ಕಾಯಿದೆ, 1994 ಅಡಿಯಲ್ಲಿ ದಾಖಲಾಗಿರುವ ಲೈಂಗಿಕ ಆಯ್ಕೆ ಸಂದರ್ಭಗಳಲ್ಲಿ ಶಿಕ್ಷೆಯ ಪ್ರಮಾಣ 1,23,255ರಲ್ಲಿ ಕೇವಲ 1. ಇದು ಏಷ್ಯಾದ ಮಾನವ ಹಕ್ಕುಗಳ ಕೇಂದ್ರ ಬಿಡುಗಡೆ ಮಾಡಿದ ವರದಿಯಾಗಿದೆ.
ದ ಸ್ಟೇಟ್ ಆಫ್ ಪಿಸಿ ಎಂಡ್ ಪಿಎನ್ಎನ್ಡಿಟಿ ಆ್ಯಕ್ಟ್, ಇಂಡಿಯಾ ಲೂಸಿಂಗ್ ಬ್ಯಾಟಲ್ ಅಗೈನ್ಸ್ಟ್ ಫೀಮೇಲ್ ಫೋಟಿಸೈಡ್ ಅಧ್ಯಯನದ ಪ್ರಕಾರ 1994ರಿಂದ 2014ರ ನಡುವೆ ಭಾರತೀಯ ದಂಡ ಸಂಹಿತೆ (ಐಪಿಸಿ) ಪರಿಚ್ಛೇದ 315 ಮತ್ತು 316ರ ಅಡಿಯಲ್ಲಿ 2,266 ಮತ್ತು ಪಿಸಿಪಿಎನ್ಡಿಟಿ ಅಡಿಯಲ್ಲಿ ಕೇವಲ 2,221ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.