ನವದೆಹಲಿ: ಸಚಿವ ಮನೋಹರ್ ಪರಿಕ್ಕರ್ ಅವರು ದೇಶದ ಮೊದಲ ಅತ್ಯುನ್ನತ ಸೇನಾ ಗೌರವ, ಪರಮ ವೀರ ಚಕ್ರ ಸ್ವೀಕೃತ ಮೇಜರ್ ಸೋಮನಾಥ್ ಶರ್ಮಾ ಅವರ 69ನೇ ಪುಣ್ಯಸ್ಮರಣೆಯ ಭಾಗವಾಗಿ ಗೌರವ ಸಲ್ಲಿಸಲಿದ್ದಾರೆ.
ಪರಿಕ್ಕರ್ ಅವರು ಇತರ ಹಿರಿಯ ಸೇನಾ ಅಧಿಕಾರಿಗಳ ಜೊತೆ ಬುದ್ಗಾಮ್ ಜಿಲ್ಲೆಯ ಶ್ರೀನಗರ ವಿಮಾನ ನಿಲ್ದಾಣದ ಬಳಿ ಮೇಜರ್ ಸೋಮನಾಥ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಜರ್ ಸೋಮನಾಥ್ ಶರ್ಮಾ ಅತ್ಯುನ್ನತ ಸೇನಾ ಗೌರವ ಪರಮ ವೀರ ಚಕ್ರ ಗೌರ ಪಡೆದ ಮೊದಲ ಅಧಿಕಾರಿಯಾಗಿದ್ದಾರೆ.
ನವೇಂಬರ್ 1947ರಲ್ಲಿ ಕಾಶ್ಮೀರದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ತೋರಿದ ಶೌರ್ಯಕ್ಕಾಗಿ ಅವರಿಗೆ ಈ ಗೌರವ ಪದಕ ನೀಡಲಾಯಿತು.
1947-48ರ ಪಾಕಿಸ್ಥಾನ ವಿರುದ್ಧದ ಯುದ್ಧ ಸಮರದಲ್ಲಿ ಪಾಕಿಸ್ಥಾನಿ ಉಗ್ರರರನ್ನು ಸದೆಬಡಿಯುವ ಸಂದರ್ಭ ಮೇಜರ್ ಸೋಮನಾಥ್ ಅವರು ಹುತಾತ್ಮರಾಗಿದ್ದರು. ಅವರು ಭಾರತೀಯ ಸೇನೆಯ 4ನೇ ಕುಮಾವೊನ್ ರೆಜಿಮೆಂಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.