ನವದೆಹಲಿ: ವಿಪತ್ತು ಅಪಾಯ ತಗ್ಗಿಸುವಿಕೆಗೆ 3 ದಿನಗಳ ಏಷ್ಯಾ ಮಂತ್ರಿಗಳ ಸಮ್ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಿದ್ದಾರೆ.
ವಿಪತ್ತು ಅಪಾಯ ತಗ್ಗಿಸುವಿಕೆ 2016 ಸಮ್ಮೇಳನವನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ರಾಜ್ನಾಥ್ ಸಿಂಗ್, ಏಷ್ಯಾ ಖಂಡದಲ್ಲಿನ ವಿಕೋಪಗಳಿಗೆ ಸೆಂಡೈ ಚೌಕಟ್ಟು ಕಾರ್ಯಸೂಚಿ ಜಾರಿಗೊಳಿಸುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ವಿಪತ್ತು ಅಪಾಯ ತಗ್ಗಿಸುವಿಕೆಯ ಸೆಂಡೈ ಚೌಕಟ್ಟು ಪಡೆದ ಬಳಿಕ ಅಂತರ್-ಸರ್ಕಾರಗಳ ಮೊದಲ ಸಮ್ಮೇಳನ ಇದಾಗಿದೆ.
ವಿಪತ್ತು ತಗ್ಗಿಸುವಿಕೆಗೆ ಅನೇಕ ಪ್ರಾದೇಶಿಕ ಸಹಕಾರದ ಗುರಿಯೊಂದಿಗೆ ಸಮ್ಮೇಳನದ ಬಳಿಕ ದೆಹಲಿಯು ಪ್ರಕಟಣೆ ನೀಡಲಿದೆ ಎಂದು ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಏಷ್ಯಾ-ಪೆಸಿಫಿಕ್ನ 61 ರಾಷ್ಟ್ರಗಳ 1,100 ವಿದೇಶಿ ಪ್ರತಿನಿಧಿಗಳು ಸೇರಿದಂತೆ 4,000 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.