ನವದೆಹಲಿ: ಈ ಬಾರಿ ನಡೆಯಲಿರುವ ಭಾರತದ 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಕಿಸ್ಥಾನದ ಯಾವುದೇ ಸಿನಿಮಾಗಳ ಪ್ರದರ್ಶನ ಮಾಡಲಾಗುವುದಿಲ್ಲ.
ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು, ಕೇಂದ್ರದ ರಾಜ್ಯ ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಗೋವಾ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ಚಲನಚಿತ್ರೋತ್ಸವದ ನಿರ್ದೇಶಕ ಸೆಂಟಿಲ್ ರಾಜನ್ ಅವರು ಪತ್ರಿಕಾಗೋಷ್ಠಿ ನಡೆಸಿ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣಗೊಳಿಸಿದರು.
ಚಲನಚಿತ್ರೋತ್ಸವವು ನವೆಂಬರ್ 20-28ರ ವರೆಗೆ ಗೋವಾದಲ್ಲಿ ನಡೆಯಲಿದೆ.
ವಿಶ್ವದಾದ್ಯಂತ ಒಟ್ಟು 1032 ಸಿನಿಮಾಗಳ ನಮೂದು ಆಗಿದ್ದು, ಅವುಗಳಲ್ಲಿ ಐಎಫ್ಎಫ್ಐ 2016, ೮೮ ರಾಷ್ಟ್ರಗಳ ೧೯೪ ಚಿತ್ರಗಳನ್ನು ಮಾತ್ರ ಪ್ರದರ್ಶಿಸಲಿದೆ. ಪಾಕಿಸ್ಥಾನದ ಚಿತ್ರಗಳನ್ನು ಕೈಬಿಡಲಾಗಿದೆ.
ನಾವು ಈ ವರ್ಷ ಯಾವುದೇ ಪಾಕಿಸ್ಥಾನಿ ಚಿತ್ರದ ಸ್ಕ್ರೀನಿಂಗ್ ಮಾಡುತ್ತಿಲ್ಲ. ನಾವು ಪಾಕಿಸ್ಥಾನದ ಎರಡು ಚಿತ್ರಗಳ ನಮೂದು ಸ್ವೀಕರಿಸಿದ್ದೆವು, ಆದರೆ ಅದರ ಗುಣಮಟ್ಟ ನಾವು ಪ್ರದರ್ಶಿಸುವ ಮಟ್ಟದಲ್ಲಿರಲಿಲ್ಲ. ನಾವು 102 ದೇಶಗಳಿಂದ 1000 ಚಿತ್ರಗಳ ನಮೂದು ಸ್ವೀಕರಿಸಿದ್ದೇವೆ ಎಂದು ರಾಜನ್ ಹೇಳಿದ್ದಾರೆ.