ವಿಶಾಖಪಟ್ಟಣಂ: ಭಾರತೀಯ ನೌಕಾಪಡೆ ಪೂರ್ವ ಕರಾವಳಿಯಲ್ಲಿ ಗಸ್ತು ತಿರುಗಬಲ್ಲ ಹೆಚ್ಚು ವ್ಯೂಹ ರಚಿತ ಕ್ಷಿಪ್ರ ದಾಳಿ ನಡೆಸಬಲ್ಲ ಐಎನ್ಎಸ್ ತಿಹಾಯು ನೌಕೆಯನ್ನು ಬುಧವಾರ ವಿಶಾಖಪ್ಟಣಂನಲ್ಲಿ ನಿಯೋಜಿಸಿದೆ.
ಈ ನೌಕೆಯನ್ನು ಪೂರ್ವ ನೌಕಾದಳದ ಎವಿಎಸ್ಎಂ, ಮುಖ್ಯ ಧ್ವಜ ಅಧಿಕಾರಿ ಎಚ್ಸಿಎಸ್ ಬಿಶ್ತ್ ನಿಯೋಜಿಸಿದ್ದಾರೆ.
ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಇಂಜಿನಿಯರ್ಸ್ ಲಿ. (ಜಿಆರ್ಎಸ್ಇ) ರಚಿತ ಕ್ಷಿಪ್ರ ದಾಳಿ ನಡೆಸಬಲ್ಲ ನಾಲ್ಕು ಫಾಲೋ-ಆನ್ ವಾಟರ್ ಜೆಟ್ ಫಾಸ್ಟ್ ಅಟ್ಯಾಕ್ ಕ್ರಾಫ್ಟ್ (ಎಫ್ಒ-ಡಬ್ಲ್ಯೂಜೆಎಫ್ಎಸಿ) ಹಡಗುಗಳ ಪೈಕಿ ತಿಹಾಯು ಹಡಗು ಎರಡನೇಯ ಹಡಗು ಇದಾಗಿದೆ.
ಜಿಆರ್ಎಸ್ಇ ವಿನ್ಯಾಸಗೊಳಿಸಿದ್ದ ಕಾರ್ ನಿಕೋಬಾರ್- ದರ್ಜೆಯ ನೌಕೆಗಳನ್ನು ೨೦೦೮ರ ಮುಂಬಯಿ ದಾಳಿಯ ಬಳಿಕ ನಿಯೋಜಿಸಲಾಗಿತ್ತು.
ಇದು ಜಿಆರ್ಎಸ್ ನಿರ್ಮಿತ ಈ ಹಿಂದಿನ ಡಬ್ಲ್ಯೂಜೆಎಫ್ಎಸಿ ಹಡಗಿನ ಸುಧಾರಿತ ಅವತರಣಿಕೆಯಾಗಿದೆ.
ದೇಶೀಯವಾಗಿ ವಿನ್ಯಾಸಗೊಳಿಸಿ, ನಿರ್ಮಿಸಲಾದ ತಿಹಾಯು ನೌಕೆಯು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ದೇಶೀಯವಾಗಿ ಯುದ್ಧ ನೌಕೆಗಳ ನಿರ್ಮಾಣದ ಕೇಂದ್ರ ಸರ್ಕಾರದ ಯೋಜನೆಯ ಮತ್ತೊಂದು ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.