ನವದೆಹಲಿ: ರಷ್ಯಾದಿಂದ ಈ ಹಿಂದೆಯೇ ಪರಮಾಣು ಜಲಾಂತರ್ಗಾಮಿ ನೌಕೆ ಪಡೆದಿದ್ದ ಭಾರತ ಇದೀಗ ಮತ್ತೊಂದು ಅಕುಲಾ 2- ಕ್ಲಾಸ್ ಪರಮಾಣು ಜಲಾಂತರ್ಗಾಮಿ ನೌಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಗೋವಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಿಮಿಸಿದ್ದ ಸಂದರ್ಭ ಎರಡೂ ರಾಷ್ಟ್ರಗಳು ಈ ಒಪ್ಪಂದ ಮಾಡಿಕೊಂಡಿದ್ದು, ಈ ವಿಚಾರವನ್ನು ಗೌಪ್ಯವಾಗಿ ಇರಿಸಲಾಗಿತ್ತು. ಇದೀಗ ಒಪ್ಪಂದದ ಕುರಿತು ರಷ್ಯಾದ ಭದ್ರತಾ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ರಷ್ಯಾದ ದೈನಿಕವೊಂದು ವರದಿ ಮಾಡಿದೆ.
ಭಾರತದೊಂದಿಗೆ ದೀರ್ಘವಾಗಿ ಚರ್ಚಿಸಲಾದ ವಿವಿಧೋದ್ದೇಶ ಯೋಜನೆ 971 ಪರಮಾಣು ಜಲಾಂತರ್ಗಾಮಿ ನೌಕೆಯನ್ನು ಭಾರತಕ್ಕೆ ವರ್ಗಾಯಿಸಲು ರಷ್ಯಾದ ನೌಕಾಪಡೆ ಗೋವಾದಲ್ಲಿ ಸಹಿ ಹಾಕಿವೆ ಎಂದು ವೆಡೋಮೋಸ್ಟಿ ವರದಿ ಮಾಡಿದೆ.
ಈ ಒಪ್ಪಂದದ ಜೊತೆ 5 ಮಿಲಿಯನ್ ಡಾಲರ್ ಮೌಲ್ಯದ ಇತರ ರಕ್ಷಣಾ ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ನೌಕಾಪಡೆ ಈಗಾಗಲೇ ರಷ್ಯಾದಿಂದ ಪಡೆದಿರುವ ಅಕುಲಾ 2-ಕ್ಲಾಸ್ ಪರಮಾಣು ನೌಕೆ ಐಎನ್ಎಸ್ ಚಕ್ರ (ಈ ಹಿಂದಿನ ಕೆ-152 ನೆರ್ಪ) ಪರಮಾಣು ನೌಕೆಯ ಸಮುದ್ರ ಪ್ರಯೋಗಗಳನ್ನು ಪೂರ್ಣಗೊಳಿಸಿದ ಬಳಿಕ ಎಪ್ರಿಲ್ 4, 2012ರಂದು ನಿಯೋಜಿಸಿತ್ತು.
8140 ಟನ್ ತೂಕದ ಈ ಜಲಾಂತರ್ಗಾಮಿ ನೌಕೆಯ 10 ವರ್ಷಗಳ ಗುತ್ತಿಗೆ 2022ರಲ್ಲಿ ಪೂರ್ಣಗೊಳ್ಳಲಿದ್ದು, ಇದೀಗ ಭಾರತ ಅಕುಲಾ 2-ಕ್ಲಾಸ್ನ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.