ನವದೆಹಲಿ: ಗೋವಾದಲ್ಲಿ ೮ನೇ ಬ್ರಿಕ್ಸ್ ಸಮ್ಮೇಳನ ಹಾಗೂ ಬ್ರಿಕ್ಸ್-ಬಿಮ್ಸ್ಟೆಕ್ ಸಮ್ಮೇಳನದ ಆತಿಥ್ಯ ವಹಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ ಪ್ರಧಾನಿ ಮೋದಿ, ಬ್ರಿಕ್ಸ್ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಎಲ್ಲ ರಾಷ್ಟ್ರಗಳನ್ನು ಸ್ವಾಗತಿಸಿದ್ದಾರೆ. ಭಾರತ ಸಮಾನ ನಿರ್ಧಾರಗಳು ಮತ್ತು ಪರಿಹಾರಗಳನ್ನು ಕಂಡು ಹಿಡಿಯಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.
ಈ ವೇಳೆ ಪ್ರದಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನನ ಹಾಗೂ ಬ್ರೆಜಿಲ್ ಅಧ್ಯಕ್ಷ ಮಿಚೆಲ್ ಟೆಮೆರ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಅಧ್ಯಕ್ಷ ಪುಟಿನ್ ಅವರ ಭೇಟಿ ಒಂದು ಅನನ್ಯ ಸ್ನೇಹ ಸಂಬಂಧ ಮತ್ತು ಪಾಲುದಾರಿಕೆಗೆ, ವಿಶಿಷ್ಟ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಲಿದೆ. ಅಧ್ಯಕ್ಷ ಟೀಮರ್ ಭೇಟಿ ಬ್ರೆಜಿಲ್ ಜೊತೆ ಹೊಸ ವಿಭಾಗಗಳ ಕಾರ್ಯತಂತ್ರ ಸಹಭಾಗಿತ್ವದಲ್ಲಿ ಪ್ರಮುಖ ಆಯಕಟ್ಟಿನ ಪಾಲುದಾರಿಕೆ ಒದಗಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬ್ರಿಕ್ಸ್ ಸಮ್ಮೇಳನ ಆಂತರಿಕ ಬ್ರಿಕ್ಸ್ ಸಹಕಾರ, ಅಭಿವೃದ್ಧಿ ಮತ್ತು, ಶಾಂತಿ, ಸ್ಥಿರತೆ, ಮತ್ತು ಸುಧಾರಣೆಯನ್ನು ಬಲಪಡಿಸಲಿದೆ ಎಂದು ಪ್ರಧಾನಿ ಮೋದಿ ತಮ್ಮ ಫೇಸ್ಬುಕ್ ಪೋಸ್ಟ್ನಲಲಿ ಬರೆದಿದ್ದಾರೆ.
ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತ ಶಿಕ್ಷಣ, ಸ್ಕಾಲರ್ಶಿಪ್, ವ್ಯಾಪಾರ, ಕ್ರೀಡೆ ಪ್ರವಾಸೋದ್ಯಮ, ಸಿನಿಮಾ ರಂಗಗಳನ್ನು ಬಲಪಡಿಸುವಲ್ಲಿ ಒತ್ತು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.