ನವದೆಹಲಿ: ಎಥನಾಲ್ ದರ ರೂ. 3 ಇಳಿಕೆಯಾಗಿ 39 ರೂ. ಪ್ರತಿ ಲೀಟರ್ ತಲುಪಿದ್ದು, ಮಾರುಕಟ್ಟೆಯ ಮುಕ್ತ ರಚನೆಗೆ ಕೇಂದ್ರ ಸಚಿವ ಸಂಪುಟ ಪೆಟ್ರೋಲ್ ಜೊತೆ ಸಂಯೋಜನೆಗೆ ಬಳಸಲಾಗುವ ಕಬ್ಬಿನ ಸತ್ವದ ಎಥನಾಲ್ ಬೆಲೆ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ.
ಪ್ರಸ್ತುತ ಸಕ್ಕರೆ ಬೆಲೆ ಮತ್ತು ಅದರ ಬೇಡಿಕೆ ಹಾಗೂ ಮಾರಾಟ ಪರಿಸ್ಥಿತಿಗಳಿಗೆ ಅನುಗುಣವಾಗಿ ಎಥನಾಲ್ ದರ ನಿರ್ಧರಿಸಲಾಗುವುದು ಎಂದು ತೈಲ ಸಚಿವ ಧಮೇಂದ್ರ ಪ್ರಧಾನ್ ಹೇಳಿದ್ದಾರೆ.
ಯಾವುದೇ ಬೆಲೆ ವ್ಯವಸ್ಥೆ ಮಾರುಕಟ್ಟೆ ಚಾಲಿತವಾಗಿರಬೇಕು ಮತ್ತು ಎಥನಾಲ್ ವಿಚಾರದಲ್ಲೂ ಇದು ಅನ್ವಯವಾಗಲಿದೆ.
ಎನ್ಡಿಎ ಸರ್ಕಾರ ಡಿಸೆಂಬರ್ 2014ರಲ್ಲಿ ಪೆಟ್ರೋಲ್ ಮಿಶ್ರಣಕ್ಕೆ ಎಥನಾಲ್ ಗಳಿಕೆ ದರವನ್ನು ಪ್ರತಿ ಲೀಟರ್ಗೆ ೪೮.೫೦ಕ್ಕೆ ನಿಗದಿಪಡಿಸಿತ್ತು. ಸಕ್ಕರೆ ಕಾರ್ಖಾನೆಗಳಿಗೆ ರೂ. 42 ಪಾವತಿಸಲಾಗುತ್ತಿದ್ದರೂ, ತೆರಿಗೆ, ಸಾರಿಗೆ ವೆಚ್ಚ ಎಲ್ಲ ಸೇರಿ ಇದರ ದರ 48.50 ನಿಗದಿಪಡಿಸಿತ್ತು.
ತೈಲ ಕಂಪೆನಿಗಳು ಶೇ.10 ಎಥನಾಲ್ನ್ನು ಪೆಟ್ರೋಲ್ ಜೊತೆ ಮಿಶ್ರ ಮಾಡಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪೆನಿಗಳಿಗೆ ಸರಬರಾಜಿಗೆ ಎಥನಾಲ್ ಸಂಯೋಜಿತ ಪೆಟ್ರೋಲ್ ಯೋಜನೆ ಕೈಗೊಳ್ಳಲು ಎಥನಾಲ್ ಬೆಲೆ ಪರಿಷ್ಕರಣೆಗೆ ಅನುಮೋದನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.