ನವದೆಹಲಿ: ಸಶಸ್ತ್ರ ಸೇನಾ ಪಡೆಗೆ ಈ ದೀಪಾವಳಿ ಹೆಚ್ಚಿನ ಸಂತಸ ತರಲಿದ್ದು, ಕೇಂದ್ರ ಸರ್ಕಾರ ಶೇ.೧೦ರಷ್ಟು ಬಾಕಿ ನೀಡಲು ನಿರ್ಧರಿಸಿದೆ.
ಭಾರತದ ಸೈನಿಕರು ಅಕ್ಟೋಬರ್ 30ರ ಒಳಗಾಗಿ ಮಧ್ಯಂತರ ವೇತನ ಪಡೆಯಲಿದ್ದಾರೆ. ಇದಕ್ಕೆ ರಕ್ಷಣಾ ಸಚಿವಾಲಯ ಅಕ್ಟೋಬರ್ ೧೦ರಂದು ಆದೇಶಿಸಿತ್ತು. 7ನೇ ವೇತನ ಆಯೋಗದ ಅಧಿಸೂಚನೆ ನೀಡಿಕೆಯ ಬಾಕಿ ಇರುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಾತ್ಕಾಲಿಕ ಆಧಾರದಲ್ಲಿ ಬಾಕಿ ಪಾವತಿ ಮಂಜೂರು ಮಾಡಿದೆ. ವೇತನವು ಜನವರಿ ೨೦೧೬ರಿಂದ ಸೈನಿಕರ ಪ್ರಸ್ತುತ ವೇತನ (ತುಟ್ಟಿಭತ್ಯೆ ಸೇರಿದಂತೆ)ದ ಶೇ. 10 ಇರಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ರಕ್ಷಣಾ ಸಚಿವಾಲಯ 7ನೇ ವೇತನ ಆಯೋಗವನ್ನು ಇತ್ತೀಚೆಗೆ ಘೋಷಿಸಿತ್ತು. ಕೇಂದ್ರ ಸಚಿವ ಸಂಪುಟದ 7ನೇ ವೇತನ ಆಯೋಗ ಅನುಮೋದನೆಯ ಕುರಿತು ಸೇನೆ ಅಸತುಷ್ಟಗೊಂಡಿದ್ದು, ಇಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದೆ.
ಈ ನಿಯಮ ಪೊಲೀಸ್ ಮತ್ತು ನಾಗರಿಕ ಆಡಳಿತದ ಎದುರು ಸೇನೆಯ ಅಂತಸ್ತು ಮತ್ತು ವೇತನ ದರ್ಜೆಯನ್ನು ಕಡಿಮೆಯಾಗಿಸುತ್ತದೆ ಎಂಬುದು ಸೇನೆಯ ವಾದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.