ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ವಿರುದ್ಧ ಭಾರತ ನಡೆಸಿದ ಸೀಮಿತ ದಾಳಿಯ ಕ್ರಮವನ್ನು ಬೆಂಬಲಿಸಿದ ಅಮೇರಿಕಾ, ಭಾರತಕ್ಕೆ ಸ್ವರಕ್ಷಣೆಯ ಹಕ್ಕಿದೆ ಎಂದು ಹೇಳಿದೆ.
ಉರಿ ದಾಳಿ ಪಾಕಿಸ್ಥನದ ಗಡಿಯಾಚೆಗಿನ ಭಯೋತ್ಪಾದನೆ ಎಂದು ಸ್ಪಷ್ಟವಾಗಿದ್ದು, ಯುದ್ಧ ಪರಿಸ್ಥಿತಿಯಿಂದ ಕೂಡಿದ ಅಫ್ಘಾನಿಸ್ಥಾನವನ್ನು ಕಾಶ್ಮೀರಕ್ಕೆ ಹೋಲಿಸಿರುವುದನ್ನು ಅಮೇರಿಕಾ ತಳ್ಳಿ ಹಾಕಿದೆ.
ಭಾರತದ ಸರ್ಜಿಕಲ್ ದಾಳಿಯನ್ನು ಬೆಂಬಲಿಸಿದ ವೈಟ್ ಹೌಸ್, ಯಾವುದೇ ರಾಷ್ಟ್ರಗಳಂತೆ ಭಾರತಕ್ಕೂ ಸ್ವಯಂ ರಕ್ಷಣೆಯ ಹಕ್ಕಿದೆ. ಆದರೆ ನೆಎರಯ ರಾಷ್ಟ್ರಗಳ ಮಿಲಿಟರಿ ಬಗ್ಗೆ ಎಚ್ಚರಿಕೆ ನೀಡಿದೆ.
ಈ ವರ್ಷಾಂತ್ಯದೊಳಗೆ ಭಾರತವನ್ನು ನ್ಯೂಕ್ಲಿಯರ್ ಸಪ್ಲಯರ್ಸ್ ಗ್ರೂಪ್ (ಎನ್ಎಸ್ಜಿ) ಸದಸ್ಯ ರಾಷ್ಟ್ರಗಳ ಪಟ್ಟಿಗೆ ಸೇರಿಸಲು ಅಮೇರಿಕಾ ಪೂರ್ಣ ಪ್ರಯತ್ನ ಮಾಡಲಿದ್ದು, ಒಬಾಮಾ ಆಡಳಿತದಲ್ಲಿ ಭಾರತ ಮತ್ತು ಅಮೇರಿಕಾ ನಡುವೆ ಸೌಹಾರ್ದಯುತ, ಕ್ರಿಯಾತ್ಮಕ ಸಂಬಂಧ ಮುಂದುವರೆದಿದೆ ಎಂದು ವೈಟ್ ಹೌಸ್ನ ದಕ್ಷಿಣ ಎಷ್ಯಾ ವಕ್ತಾರ ಪೀಟರ್ ಲೆವೋಯ್ ಹೇಳಿದ್ದಾರೆ.
ಭಾರತದ ಮೇಲೆ ಭವಿಷ್ಯದಲ್ಲಿ ಭಯೋತ್ಪಾದಕ ದಾಳಿ ನಡೆಯದಂತೆ ಕಾಳಜಿ ವಹಿಸುವಂತೆ ಎಚ್ಚರಿಕೆ ನೀಡುತ್ತಿದ್ದೇವೆ. ಗಡೆಯಾಚೆಗಿನ ಭಯೋತ್ಪಾದನೆ ಬೆದರಿಕೆಯನ್ನು ಭಾರತ ತನ್ನ ಮಿಲಿಟರಿ ಮೂಲಕವೇ ನೀಡಬೇಕಿದೆ. ಆದ್ದರಿಂದ ಎಚ್ಚರಿಕೆ ಸಲಹೆ ನೀಡುತ್ತಿದ್ದೇವೆ ಎಂದು ಲೆವೋಯ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.