ನವದೆಹಲಿ: ಭಾರತೀಯ ಗಡಿ ನಿಯಂತ್ರಣ ರೇಖೆಯಲ್ಲಿ ಸೀಮಿತ ದಾಳಿ ನಡೆಸಿದ್ದರ ಸೇಡು ತೀರಿಸಲು ಪಾಕಿಸ್ಥಾನ ಗುಪ್ತಚರ ಇಲಾಖೆ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ದಾಳಿ ನಡೆಸಲು ಜೈಶ್-ಎ ಮೊಹಮ್ಮದ್ ಸಂಘಟನೆಗೆ ಹೇಳಿರುವುದಾಗಿ ಗುಪ್ತಚರ ಇಲಾಖೆ ತಿಳಿಸಿದೆ.
ಇನ್ನು ಪಾಕ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಭಾರತದ ಸಂಸತ್ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವುದಾಗಿ ಹೇಳಲಾಗಿದೆ. ಅಫ್ಲ್ ಗುರು ನೇತೃತ್ವದ ಜೈಶ್ ಸಂಘಟನೆಯ ಒಂದು ಗುಂಪು 2001ರಲ್ಲಿ ಭಾರತದ ಸಂಸತ್ ಮೇಲೆ ದಾಳಿ ನಡೆಸಿತ್ತು.
ಸಂಸತ್ ಮೇಲೆ ಭಯಾನಕ ದಾಳಿ ನಡೆಸುವ ಬಗ್ಗೆ ಜೈಶ್ ಸಂಘಟನೆಯ ಯೋಜನೆ ಕುರಿತು ಗುಪ್ತಚರ ಇಲಾಖೆ ಮತ್ತು ಜಮ್ಮು ಮತ್ತು ಕಾಶ್ಮೀರದ ಸಿಐಡಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಭದ್ರತಾ ಪಡೆಯ ನಂಬಲರ್ಹ ಮೂಲಗಳು ತಿಳಿಸಿವೆ.
ದೆಹಲಿ ಸಂಸತ್ಗೆ ಮೌಲಾನಾ ಅಜರ್ ನೇತೃತ್ವದ ಜೆಇಎಂ ಮತ್ತು ಅದರ ವಿಭಜಿತ ಗುಂಪು, ಮೌಲಾನಾ ಅಬ್ದುರ್ ರೆಹ್ಮಾನ್ ನೇತೃತ್ವದ ಜೈಶುಲ್- ಹಕ್ ತನ್ಝೀಮ್ ಸಂಘಟನೆಯ ಅತಿ ದೊಡ್ಡ ಬೆದರಿಕೆಯಾಗಿದೆ ಎಂದು ನಂಬಲಾಗಿದೆ. ಅಬ್ದುರ್ ರೆಹ್ಮಾನ್ ಈ ಹಿಂದೆ ಭಾರತದಿಂದಸ ಕಂದಾಹಾರ್ಗೆ ತೆರಳುತ್ತಿದ್ದ ವಿಮಾನ ಅಪಹರಣಕ್ಕೆ ಕಾರಣನಾಗಿದ್ದ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.