ಮುಂಬಯಿ: ಸೆಪ್ಟೆಂಬರ್ ತಿಂಗಳ ಮೊದಲ ಕಾರ್ಯಾಚರಣೆಯಲ್ಲೇ 16 ಮಿಲಿಯನ್ ಬಳಕೆದಾರರೊಂದಿಗೆ ‘ವಿಶ್ವ ದಾಖಲೆ’ ನಿರ್ಮಿಸಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ.
4G ಮಾರುಕಟ್ಟೆಯಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ರಿಲಯನ್ಸ್ ಜಿಯೋ, ಫೇಸ್ಬುಕ್, ವಾಟ್ಸ್ಅಪ್, ಸ್ಕೈಪ್ ಸೇರಿದಂತೆ ಇತರ ಟೆಲಿಕಾಂ ಆಯೋಜಕರು ಅಥವಾ ಸ್ಟಾರ್ಟ್ಅಪ್ಗಳಿಗಿಂತ ವೇಗವಾಗಿ ಬೆಳವಣಿಗೆ ಸಾಧಿಸಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಯೋ ವೆಲ್ಕಮ್ ಆಫರ್ಗೆ ಭಾರತದಾದ್ಯಂತ ಜನರ ಅಗಾಧ ಪ್ರತಿಕ್ರಿಯೆಯಿಂದ ಸಂತೋಷವಾಗಿದೆ. ಜನರು ಅದರ ಡಾಟಾ ಆಫರ್ಗಳ ಅಧಿಕಾರ ಪಡೆಯಲಿದ್ದಾರೆ ಎಂದು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಭಾಗವಾಗಿರುವ ರಿಲಯನ್ಸ್ ಇನ್ಫೋಕಾಂ ಸೆಪ್ಟೆಂಬರ್ 5 ರಂದು ತನ್ನ ವಾಣಿಜ್ಯ ಸೇವೆಯನ್ನು ಆರಂಭಿಸಿತ್ತು.
ಜಿಯೋ 3100 ನಗರಗಳು ಮತ್ತು ಪಟ್ಟಣಗಳಲ್ಲಿ ಆಧಾರ್ ಕಾರ್ಡ್ ಆಧಾರಿತ ಪೇಪರ್ಲೆಸ್ ಸಿಮ್ ಆ್ಯಕ್ಟಿವೇಶನ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಇದು ಕೆಲವೇ ನಿಮಿಷಗಳಲ್ಲಿ ಗ್ರಾಹಕರ ಸಿಮ್ ಸಕ್ರಿಯಗೊಳಿಸಲು ಸಹಕರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.