ನವದೆಹಲಿ: ಸ್ಮಾರಕಗಳ ಸ್ವಚ್ಛತೆಯನ್ನು ಸುಧಾರಿಸಲು ಕೇಂದ್ರೀಯ ರಕ್ಷಿತ ಪುರಾತತ್ವಗಳ ಸೈಟ್ಗಳಲ್ಲಿ ಪಾಲಿಥಿನ್ ಚೀಲಗಳ ನಿಷೇಧದ ವ್ಯಾಪ್ತಿಯನ್ನು 100 ಮೀಟರ್ ಆಯಕಟ್ಟಿನಿಂದ 300 ಮೀಟರ್ಗೆ ವಿಸ್ತರಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದೆ.
ಕೇಂದ್ರ ಸರ್ಕಾರ ಅಕ್ಟೋಬರ್ 2ರಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಅಧೀನದಲ್ಲಿರುವ ಸುಮಾರು 3,680 ಸ್ಮಾರಕಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಪಾಲಿಥಿನ್ ಚೀಲವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.
ಸ್ಮಾರಕಗಳ ಸುತ್ತಲಿನ 100ರಿಂದ 300 ಮೀ. ವ್ಯಾಪ್ತಿಯ ಪ್ರದೇಶವನ್ನು ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿಯೊಳಗೆ ಬರುವ ನಿಯಂತ್ರಿತ ವಲಯ ಎಂದು ಕರೆಯಲಾಗುತ್ತದೆ.
ಸ್ಮಾರಕಗಳ ಸುತ್ತ 100 ಮೀ.ನಿಂದ 300 ಮೀ.ವರೆಗೆ ಪಾಲಿಥಿನ್- ಮುಕ್ತ ಅಭಿಯಾನವನ್ನು ವಿಸ್ತರತಿಸುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.
ಪ್ರಾವಾಸೋದ್ಯಮ ಇಲಾಖೆ ಅಧೀನದಲ್ಲಿvರುವ ಪ್ರದೇಶಗಳಲ್ಲಿ ಪಾಲಿಥಿನ್ ಮುಕ್ತ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಯೋಜನೆ ಇದೆ ಎಂದು ಶರ್ಮಾ ಹೇಳಿದ್ದಾರೆ.
ಎಎಸ್ಐ ಸ್ಮಾರಕಗಳಲ್ಲಿ ಸುರಕ್ಷತೆ ಗಡಿ, ಶೌಚಾಲಯಗಳು, ದಿವ್ಯಾಂಗ ಸ್ನೇಹಿ ಸೌಲಭ್ಯಗಳ್ನು ಒದಗಿಸಲು 350 ಕೋಟಿ ರೂ. ಮಂಜೂರು ಮಾಡಿರುವುದಾಗಿ ಶರ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.