ಕುಪ್ವಾರ: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಲ್ಯಾಂಗೇಟ್ ಬಳಿ ಉಗ್ರರು ಗುರುವಾರ ಬೆಳಗ್ಗೆ ಉರಿ ಉಗ್ರ ದಾಳಿ ಮಾದರಿ ದಾಳಿ ನಡೆಸಿದ್ದು, ಸೇನೆಯು ಮೂವರು ಉಗ್ರರನ್ನು ಹತ್ಯೆ ಮಾಡಿದೆ.
ಮೂವರು ಹತ ಉಗ್ರರಿಂದ ಪಾಕಿಸ್ಥಾನದ ಚಿಹ್ನೆ ಇರುವ ಶಸ್ತ್ರಾಸ್ತ್ರಗಳು, ಆಹಾರ ಪದಾರ್ಥಗಳು ಮತ್ತು ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
ಉಗ್ರರು ಸೆಂಟ್ರಿ ಪೋಸ್ಟ್ಗಳು ಮತ್ತು ವಿಶ್ರಾಂತಿ ಪಡೆಯುತಿದ್ದ ಸೈನಿಕರ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಸೇನೆ ಪ್ರತಿದಾಳಿ ನಡೆಸಿ ಉಗ್ರರನ್ನು ಹೊಡೆದುರುಳಿಸಿದೆ ಎಂದು ಸೇನಾ ವಕ್ತಾರ ಕ. ರಾಜೇಶ್ ಕಾಲಿಯಾ ಹೇಳಿದ್ದಾರೆ.
ಸೇನೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಎಕೆ ೪೭ ರೈಫಲ್ಗಳು, ಗ್ರೆನೇಡ್ ಸ್ಫೋಟಕ ಸಾಧನಗಳು, ರೇಡಿಯೋ, ಜಿಪಿಎಸ್, ಸ್ಫೋಟಕಗಳು, ನಕ್ಷೆ, ಮೆಟ್ರಿಕ್ ಪೇಪರ್ಗಳನ್ನು ವಶಪಡಿಸಿಕೊಂಡಿದೆ ಎಂದು ಸೇನೆ ತಿಳಿಸಿದೆ.
ನಿಯಂತ್ರಣ ರೇಖೆ ಬಳಿ ಮೂರು ಕಡೆಗಳಲ್ಲಿ ಒಳನುಸುಳುವಿಕೆ ಪ್ರಯತ್ನ ನಡೆಸಲಾಗಿದ್ದು, ಇದನ್ನು ಸೇನೆ ತಡೆದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.