ಕವುರೊ: ಭಾರತದ ಅತ್ಯಾಧುನಿಕ ಉಪಗ್ರಹ ಜಿಸ್ಯಾಟ್-18ನ್ನು ದಕ್ಷಿಣ ಅಮೇರಿಕಾದ ಫ್ರೆಂಚ್ ಗಯಾನಾದ ಕವುರೋದಿಂದ ಎರಿಯಾನ್ 5 ರಾಕೆಟ್ ಮೂಲಕ ಇಸ್ರೋ ಉಡಾವಣೆ ಮಾಡಿದೆ.
ವ್ಯತಿರಿಕ್ತ ಹವಾಮಾನದಿಂದಾಗಿ ಉಪಗ್ರಹ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿದ್ದು, ಭಾರತೀಯ ಕಾಲಮಾನ ಗುರುವಾರ ಬೆಳಗಿನ ಜಾವ 2 ಗಂಟೆಗೆ ಜಿಸ್ಯಾಟ್-18 ಉಪಗ್ರಹವನ್ನು ಕಕ್ಷೆಗೆ ಉಡಾವಣೆ ಮಾಡಲಾಯಿತು.
ಸುಮಾರು 4 ಟನ್ಗಳಷ್ಟು ತೂಕ ಹೊಂದಿದ ಅತ್ಯಂತ ಭಾರೀ ಗಾತ್ರದ ಜಿಸ್ಯಾಟ್-18 ಸಂಪರ್ಕ ಉಪಗ್ರಹ ಬ್ಯಾಂಕಿಂಗ್ ಮತ್ತು ದೂರದರ್ಶನ ಸೇವೆಗಳನ್ನು ಹೆಚ್ಚಿಸಲು ಸಹಾಯಕವಾಗಲಿದೆ.
ಕರ್ನಾಟಕದಲ್ಲಿರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ವ್ಯವಸ್ಥೆ (ಎಂಸಿಎಫ್) ಉಪಗ್ರಹ ಉಡಾವಣೆಯ ನಂತರ ಜಿಸ್ಯಾಟ್-18ರ ಕಮಾಂಡ್ ಮತ್ತು ನಿಯಂತ್ರಣವನ್ನು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.