×
Home About Us Advertise With s Contact Us

ಕ್ರೈಸ್ಥ ಸನ್ಯಾಸಿನಿಯ ಗ್ಯಾಂಗ್‌ರೇಪ್: ಒರ್ವನ ಬಂಧನ

rapeಮುಂಬಯಿ: ಪಶ್ಚಿಮಬಂಗಾಳದ ನಾಡಿಯಾದಲ್ಲಿ ಕ್ರೈಸ್ಥ ಸನ್ಯಾಸಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಗುರುವಾರ ಮುಂಬಯಿಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಲೀಮ್ ಎಂದು ಗುರುತಿಸಲಾಗಿದ್ದು, ಅತ್ಯಾಚಾರ ಕೃತ್ಯ ಎಸಗಿ ಈತ ಮುಂಬಯಿಗೆ ಪಲಾಯನ ಮಾಡಿದ್ದ ಎಂದು ಹೇಳಲಾಗಿದೆ. ಇಂದು ಪಶ್ಚಿಮಬಂಗಾಳ ಪೊಲೀಸರು ಈತನನ್ನು ಬಂಧನಕ್ಕೊಳಪಡಿಸಿದ್ದಾರೆ.

ಕಾನ್ವೆಂಟ್‌ನೊಳಗೆ ನುಗ್ಗಿದ್ದ ದುಷ್ಕರ್ಮಿಗಳು 71 ವರ್ಷದ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿ ಬೀರುವಿನಲ್ಲಿದ್ದ 12 ಲಕ್ಷ ರೂಪಾಯಿಗಳನ್ನು ದೋಚಿದ್ದರು. ಈ ಪ್ರಕರಣ ಕೇಂದ್ರ ಮತ್ತು ಪಶ್ಚಿಮಬಂಗಾಳ ಸರ್ಕಾರದ ಮೇಲೆ ಜನರಿಗೆ ಆಕ್ರೋಶ ಮೂಡುವಂತೆ ಮಾಡಿತ್ತು.

ಈ ಪ್ರಕರಣವನ್ನು ಬಳಿಕ ಮಮತಾ ಬ್ಯಾನರ್ಜಿ ಸರ್ಕಾರ ಸಿಬಿಐಗೆ ವಹಿಸಿತ್ತು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top