ಜೊಹಾನ್ಸ್ಬರ್ಗ್: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ೧೬ ವರ್ಷದ ಬಾಲಕಿ ಕಿಯಾರಾ ನಿರ್ಗಿನ್, ಕಿತ್ತಳೆ ಹಣ್ಣಿನ ಸಿಪ್ಪೆ ಬಳಸಿ ಮಣ್ಣಿನಲ್ಲಿ ನೀರಿನ ಅಂಶ ಬೇಗನೇ ಆರಿ ಹೋಗದಂತೆ ನೀರನ್ನು ಹೀರಿಕೊಳ್ಳುವ ಅಗ್ಗದ ‘ಸೂಪರ್ ಅಬ್ಸಾರ್ಬೆಂಟ್ ಮೆಟೀರಿಯಲ್’ ತಯಾರಿಸಿದ್ದಾರೆ. ಇದಕ್ಕಾಗಿ ಆಕೆ ಅಮೇರಿಕಾದಲ್ಲಿ ನಡೆದ ವಾರ್ಷಿಕ ಗೂಗಲ್ ವಿಜ್ಞಾನ ಮೇಳದಲ್ಲಿ 50,000 ಡಾಲರ್ ವಿದ್ಯಾರ್ಥಿವೇತನ ಗೆದ್ದುಕೊಂಡಿದ್ದಾರೆ.
ಸೇಂಟ್ ಮಾರ್ಟಿನ್ನ ಖಾಸಗಿ ಶಾಲೆಯ ಗ್ರೇಡ್ 11 ವಿದ್ಯಾರ್ಥಿನಿಯಾಗಿರುವ ಕಿಯಾರಾ, ಬರ ಪೀಡಿತ ದಕ್ಷಿಣ ಆಫ್ರಿಕಾದಲ್ಲಿ ನೀರಿನ ಕೊರತೆಯನ್ನು ನಿವಾರಿಸಲು ತನ್ನ ‘ನೋ ಮೋರ್ ಥಸ್ಟಿ ಪ್ಲಾನ್ಟ್ಸ್’ ಪ್ರಾಜೆಕ್ಟ್ ಸಲ್ಲಿಸಿದ್ದಾರೆ.
ಈ ಯೋಜನೆಗೆ ಕಿಯಾರಾ ಕಿತ್ತಳೆ ಮತ್ತು ಅವಕ್ಕಾಡೋ ಹಣ್ಣಿನ ಸಿಪ್ಪೆಯನ್ನು ಬಳಸಿದ್ದಾರೆ. ಗೂಗಲ್ ವಿಜ್ಞಾನ ಮೇಳ 13ರಿಂದ 18 ವರ್ಷದೊಳಗಿನ ಕಿರಿಯ ವಿಜ್ಞಾನಿಗಳನ್ನು ಆಹ್ವಾನಿಸಿ ವಿಶ್ವದ ವಿಜ್ಞಾನ ಮತ್ತು ತಂತ್ರಜ್ಞಾನ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ರಮವಾಗಿದೆ.
ನನ್ನ 7ನೇ ವಯಸ್ಸಿನಲ್ಲೇ ರಸಾಯನಶಾಸ್ತ್ರದಲ್ಲಿ ಹೆಚ್ಚು ಒಲವು ಹೊಂದಿದ್ದು, ವಿನೆಗರ್ ಮತ್ತು ಅಡುಗೆ ಸೋಡಾ ಬಳಸಿ ವಿವಿಧ ಪ್ರಯೋಗಗಳನ್ನು ನಡೆಸಿದ್ದೇನೆ. ಎಂ. ಎಸ್. ಸ್ವಾಮಿನಾಥನ್ ನನಗೆ ಪ್ರೇರಣೆಯಾಗಿದ್ದು, ಸಮರ್ಥ ಕೃಷಿ ಅಭಿವೃದ್ಧಿಯಲ್ಲಿ ಅವರು ಕೇವಲ ಭಾರತ ಅಲ್ಲದೇ ಇತರ ದೇಶಗಳಿಗೆ ಮಾದರಿಯಾಗಿದ್ದಾರೆ ಎಂದು ಕಿಯಾರಾ ಹೇಳಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.