ನ್ಯೂಯಾರ್ಕ್: ಇತ್ತೀಚೆಗೆ ನಡೆದ ಟೆನಿಸ್ ಪ್ರದರ್ಶನ ಪಂದ್ಯದಲ್ಲಿ ಖ್ಯಾತ ಟೆನ್ನಿಸ್ ತಾರೆ ರಾಫೆಲ್ ನಡಾಲ್, ಮಹಿಳೆಯೊಬ್ಬಳು ಪ್ರೇಕ್ಷಕರ ನಡುವೆ ಕಳೆದುಕೊಂಡಿದ್ದ ತನ್ನ ಮಗಳನ್ನು ಹುಡುಕಲು ಸಹಾಯವಾಗುವಂತೆ ಕೆಲ ಕ್ಷಣಗಳ ಕಾಲ ಆಟವನ್ನು ಸ್ಥಗಿತಗೊಳಿಸಿದ್ದಾರೆ. ಈಗ ಈ ವೀಡಿಯೋ ವೈರಲ್ ಆಗಿದೆ.
ನಡಾಲ್ ಮತ್ತು ಸಹ ಆಟಗಾರ ಸ್ಪೇನ್ನ ಸೈಮನ್ ಸೋಲ್ಬಸ್ ಅವರು ಜಾನ್ ಮೆಕೆನ್ರೋ ಮತ್ತು ಕಾರ್ಲೋಸ್ ಮೋಯಾ ವಿರುದ್ಧ ಡಬಲ್ಸ್ ಪಂದವಳಿಯಲ್ಲಿ ಆಡುತ್ತಿದ್ದರು.
ಸರ್ವ್ ಮಾಡಲು ತಯಾರಾಗಿದ್ದ ನಡಾಲ್, ತಾಯಿಯೊಬ್ಬಳು ಪ್ರೇಕ್ಷಕರ ನಡುವೆ ಉರೇಕಗೊಂಡು ತನ್ನ ಮಗಳನ್ನು ಹುಡುತ್ತಿರುವುದನ್ನು ಕಂಡು ಕೆಲ ಕ್ಷಣಗಳ ಕಾಲ ಆಟವನ್ನು ನಿಲ್ಲಿಸಿದ್ದರು ಎಂದು ದ ಸನ್ ವರದಿ ಮಾಡಿದೆ.
ಸ್ಥಳದಲ್ಲಿ ನೆರೆದಿದ್ದ ಪ್ರೇಕ್ಷಕರು ಮಗು ಕ್ಲಾರಾಳನ್ನು ಹುಡುಕಲು ಸಹಕರಿಸಿದರು. ಅನಂತರ ನಡಾಲ್ ಅವರು ಆಟವನ್ನು ಮುಂದುವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.